ಕಾಂಗ್ರೆಸ್ ಸುದ್ದಿಗೋಷ್ಠಿ ರದ್ದು: ಅಂತಿಮಗೊಂಡ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಸಂಜೆ ಬಿಡುಗಡೆ

ನವದೆಹಲಿ:ಏ-15:ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳಿಸಲು ಭಾರೀ ಕಸರತ್ತು ನಡೆಸಿತ್ತು. ಅಂತಿಮವಾಗಿ ಮೊದಲ ಪಟ್ಟಿ ಸಿದ್ದಗೊಂಡಿದ್ದು, ದೆಹಲಿ ನಾಯಕರ ಕೈಯಲ್ಲಿ ಟಿಕೆಟ್​ ಲಿಸ್ಟ್ ಇದ್ದು, ಅಧಿಕೃತ ಘೋಷಣೆವೊಂದೇ ಬಾಕಿಯಿದೆ.

ಇಂದು ಮಧ್ಯಾಹ್ನ 3 ಗಂಟೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿ ಪಟ್ಟಿ ಬಿಡುಗಡೆ ಮಾಡುತ್ತಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಇದು ಕೊನೆಕ್ಷಣದಲ್ಲಿ ಸುದ್ದಿಗೋಷ್ಜ್ಠಿ ರದ್ದಾಗಿದ್ದು, ಸುದ್ದಿಗೋಷ್ಠಿ ಬದಲು ಎಐಸಿಸಿ ಕಚೇರಿಯಿಂದ ಪ್ರಕಟಣೆ ರೂಪದಲ್ಲಿ ಮೊದಲ ಪಟ್ಟಿ ಸಂಜೆ 6ಕ್ಕೆ ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಅದಾಗಲೇ ಸಿಎಂ ಸಿದ್ದರಾಮಯ್ಯ ದಿಲ್ಲಿಯ ರಾಹುಲ್ ನಿವಾಸದಿಂದ ಹೊರಟಿದ್ದು, ಮೈಸೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.

ಇನ್ನು16 ಹಾಲಿ ಶಾಸಕರಿಗೆ ಕೊಕ್ ನೀಡಲಾಗಿದ್ದು, ಕಳಂಕಿತ ಎಸ್ ವೈ ಮೇಟಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಅಶೋಕ್ ಖೇಣಿ ಸೇರಿ ವಲಸಿಗರಿಗೆ ಟಿಕೆಟ್‌ ನೀಡುವುದು ಪಕ್ಕಾ ಆಗಿದೆ ಎನ್ನಲಾಗಿದೆ.

karnataka assembly election,congress candidate list final, press meet, cancelled

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ