ಯೋಗಿ ವಿರುದ್ಧ ಗುಂಡೂರಾವ್ ಹೇಳಿಕೆಗೆ ಕೊಟ್ಟರು ಬಿಎಸವೈ ಟಾಂಗ್

ಬೆಂಗಳೂರು ಏ15: ನಿನ್ನೆ ರಾತ್ರಿ ನಡೆದ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಬಳಿ ಉತ್ತರ ಪ್ರದೇಶದ ಉನ್ನಾವ್ ಅತ್ಯಾಚಾರ ಪ್ರಕರಣದ ಹಿಂದೆ ಕಾಂಗ್ರೆಸ್ ರವರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ‌ಕಾರ್ಯಾಧ್ಯಾಕ್ಷ ದಿನೇಶ್ ಗುಂಡೂರಾವ್ ಅವರು ಉತ್ತರ ಪ್ರದೇಶ ಮುಖ್ಯ ಮಂತ್ರಿಗಳಾದ ಯೋಗಿ ಆದಿತ್ಯನಾಥ್‌ ರವರು ಈ ಬಾರಿ ಕರ್ನಾಟಕಕ್ಕೆ ಬಂದರೆ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅದರ ಜೊತೆ “ಅವನು ಯೋಗಿ ಆದಿತ್ಯ ‌ನಾಥ್ ಅಲ್ಲ ಢೋಂಗಿ ಆದಿತ್ಯ ‌ನಾಥ್. ಮುಖ್ಯಮಂತ್ರಿ ಸ್ಥಾನದಲ್ಲಿ ಇರೋದಕ್ಕೆ ಅವನು‌ ನಾಲಾಯಕ್ಕು. ಪ್ರಧಾನಿ ನರೇಂದ್ರ ‌ಮೋದಿ ಅವನನ್ನು ಸಿಎಂ ಸ್ಥಾನದಿಂದ ತೆಗೆಯಬೇಕು” ಎಂದು ಏಕವಚನದಲ್ಲಿಯೇ ನಿಂದಿಸಿದರು.

ಇದನ್ನು ಖಂಡಿಸಿ ಬಿಜೆಪಿಯ ರಾಜ್ಯಾಧ್ಯಕ್ಷರು ಹಾಗು ಮಾಜಿ ಮುಖ್ಯಮಂತ್ರಿ ಯಡ್ಡಿಯೂರಪ್ಪನವರು “ಯೋಗಿ ಆದಿತ್ಯನಾಥರ ಬಗ್ಗೆ ದಿನೇಶ್ ಗುಂಡೂರಾವ್ ಆಡಿರುವ ಮಾತು ನನಗೆ ತೀವ್ರ ಆಘಾತ ತಂದಿದೆ. ಮುಖ್ಯಮಂತ್ರಿ ಮತ್ತು ನಾಥ ಪಂಥದ ಸಂತರಿಗೆ ನೀಡುವ ಮರ್ಯಾದೆ ಇದಲ್ಲ.‌ ಇದರಿಂದ ಕರ್ನಾಟಕದಲ್ಲಿರುವ ಲಕ್ಷಾಂತರ ನಾಥ ಪಂಥ ಅನುಯಾಯಿಗಳಿಗೆ (ವೊಕ್ಕಲಿಗರಿಗೆ) ತೀವ್ರ ಅವಮಾನವಾಗಿದೆ. ದಿನೇಶರ, ಕಾಂಗ್ರೆಸ್‌ನ ಸಂಸ್ಕೃತಿಯನ್ನು ಕಟುವಾಗಿ ಖಂಡಿಸುತ್ತೇನೆ‌.” ಎಂದು ಟಾಂಗ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ