ಮೊಳಕಾಲ್ಮೂರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಾಹನದ ಮೇಲೆ ಕಲ್ಲು ತೂರಾಟಕ್ಕೆ ಶಾಸಕ ತಿಪ್ಪೆಸ್ವಾಮಿಯೇ ಸೂಚನೆ: ಜಾಲತಾಣಗಳಲ್ಲಿ ವಿಡಿಯೋ ವೈರಲ್

ಚಿತ್ರದುರ್ಗ:ಏ-15: ಚಿತ್ರದುರ್ಗದ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ತಿಪ್ಪೇಸ್ವಾಮಿ ಅವರು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮೇಲೆ ಕಲ್ಲು ತೂರಾಟ ನಡೆಸುವಂತೆ ಬೆಂಬಲಿಗರಿಗೆ ಸೂಚಿಸಿರುವ ವಿಡಿಯೋ ಈಗ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಕ್ಷೇತ್ರ ಭೇಟಿ ಸಂದರ್ಭದಲ್ಲಿ ಅವರ ಕಾರಿಗೆ ಕಲ್ಲು ತೂರಾಟ ನಡೆಸಲು ಶಾಸಕ ತಿಪ್ಪೇಸ್ವಾಮಿಯೇ ಪ್ರಚೋದನೆ ನೀಡಿದ್ದರು ಎನ್ನಲಾದ ವಿಡಿಯೋ ಸಿಕ್ಕಿದ್ದು, ಈ ವಿಡಿಯೋದಲ್ಲಿ ಶ್ರೀರಾಮುಲು ಕ್ಷೇತ್ರ ಭೇಟಿ ವೇಳೆ ಗಲಾಟೆ ಮಾಡುವಂತೆ ಹೇಳಿದ್ದಾರೆ.

ಶ್ರೀರಾಮುಲು ಬಂದಾಗ ಕಲ್ಲು ತೂರಿ ಪ್ರತಿಭಟಿಸುವಂತೆ ಹೇಳಿರುವ ವಿಡಿಯೋದಲ್ಲಿ, ಬೆಂಬಲಿಗರಿಗೆ ‘ಈಗ ಗೌರ ಸಮುದ್ರಕ್ಕೆ ಬರ್ತಾನೆ ಗರಣಿಯಲ್ಲಿ ಅಡ್ಡ ಹಾಕಿ’, ನಾಲ್ಕು ಕಲ್ಲು ತೂರಿ ಎಂದು ಬೆಂಬಲಿಗರ ಜತೆ ಫೋನ್ ಸಂಭಾಷಣೆ ನಡೆಸಿರುವ ವಿಡಿಯೋ ಇದೆ.

ಮೊಳಕಾಲ್ಮೂರಿಗೆ ಶ್ರೀರಾಮುಲು ಬಂದಿದ್ದ ವೇಳೆ ಏ. 13ರಂದು ನಾಯಕನಹಟ್ಟಿಯಲ್ಲಿ ಕಲ್ಲು ತೂರಾಟ ನಡೆದಿತ್ತು. ಗಲಾಟೆ ಹೆಚ್ಚಿದ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ತಿಪ್ಪೆಸ್ವಾಮಿ ನನಗೇನು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

Assembly Election,BJP,Chitradurga,Molakalmuru,Sriramulu,Stone Pelting,Thippeswamy,Video Viral

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ