ದೊಡ್ಡ ಗಣಪತಿ ದೇವಸ್ಥಾನದಲ್ಲಿ `ನೀನಾ?’ ಆರಂಭ

ಓಂಸಾಯಿರಾಂ ಪ್ರೊಡಕ್ಷನ್ ಲಾಂಛನದಲ್ಲಿ ಎಂ.ಮಂಜುನಾಥ್ ಅವರು ನಿರ್ಮಿಸುತ್ತಿರುವ `ನೀನಾ?` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ದೇವರ ಮೇಲೆ ಸೆರೆ ಹಿಡಿಯಲಾದ ಪ್ರಥಮ ಸನ್ನಿವೇಶಕ್ಕೆ ನೇಹನೀಶ್ ಅವರು ಆರಂಭಫಲಕ ತೋರಿದರು. ರಮೇಶ್‍ರಾಜು ಕ್ಯಾಮೆರಾ ಚಾಲನೆ ಮಾಡಿದರು.
ಆರಕ್ಕೂ ಹೆಚ್ಚು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಆರ್.ವಿಜಯಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕೆ.ವಿ.ಎಂ ಅವರು ಕಥೆ ಬರೆದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ 30ದಿನಗಳ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ವಿಜಯ್ ಯಾರ್ಡ್‍ಲಿ ಸಂಗೀತ ನೀಡಿದ್ದಾರೆ. ಯೇಸು ಛಾಯಾಗ್ರಹಣ, ಶಿವಪ್ರಸಾದ್ ಸಂಕಲನವಿರುವ ಈ ಚಿತ್ರಕ್ಕೆ ಮಹೇಶ್ ಸಂಭಾಷಣೆ ಬರೆದಿದ್ದಾರೆ. ಯೋಗರಾಜ್ ಭಟ್ ಗೀತರಚನೆ ಮಾಡಿದ್ದಾರೆ.
ಮಂಜುನಾಥ್, ಕುಶಾಲ್, ಭಾನುಪ್ರಕಾಶ್, ಮೇಘನ ಪ್ರಕಾಶ್, ಪವಿತ್ರ, ಮೂರ್ತಿ ಮುಂತಾದವರು `ನೀನಾ?` ಚಿತ್ರದ ತಾರಾಬಳಗದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ