ಡಾ ರಾಜಕುಮಾರ್ 12ನೇ ಪುಣ್ಯ ತಿಥಿ: ಕಂಠೀರವ ಸ್ಟೂಡಿಯೋದಲ್ಲಿ ಅಭಿಮಾನಿಗಳ ದಂಡು

ಬೆಂಗಳೂರು,ಏ.12

ವರನಟ ಡಾ.ರಾಜ್‌ ಕುಮಾರ್‌ ಅವರ 12 ನೇ ಪುಣ್ಯ ತಿಥಿಯನ್ನು ಗುರುವಾರ ಆಚರಿಸಲಾಗುತ್ತಿದ್ದು, ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಸಾವಿರಾರು ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸುತ್ತಿದ್ದಾರೆ.

ಸಮಾಧಿಗೆ ರಾಜ್‌ ಪುತ್ರರಾದ ಡಾ.ಶಿವರಾಜ್‌ ಕುಮಾರ್‌, ರಾಘವೇಂದ್ರ ರಾಜ್‌ ಕುಮಾರ್‌, ಪುನೀತ್‌ ರಾಜ್‌ ಕುಮಾರ್‌ ಸೇರಿದಂತೆ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದರು. ಸಮಾಧಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ.

ವರ್ಷಂಪ್ರತಿ ಈ ದಿನ ರಾಜ್‌ ಸ್ಮರಣಾರ್ಥವಾಗಿ ರಕ್ತದಾನ,ಅನ್ನದಾನ ಸೇರಿದಂತೆ ವಿವಿಧ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು ಆದರೆ ಚುನಾವಣಾ ನೀತಿ ಸಂಹಿತಿ ಹಿನ್ನಲೆಯಲ್ಲಿ ಸರಳವಾಗಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ