ಮದುವೆಗೆ ತೆರಳುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಭಾರಿ ಅವಘಡ: ಓರ್ವ ಸಾವು, 11 ಜನರ ಸ್ಥಿತಿ ಗಂಭೀರ !

ರಾಯಚೂರು:ಏ-11: ಚಲಿಸುತ್ತಿದ್ದ ಲಾರಿಗೆ ವಿದ್ಯುತ್ ತಂತಿ ತಗುಲಿ ಹರಿದ ಕಾರಣ ಓರ್ವ ಯುವಕ ಮೃತಪಟ್ಟಿದ್ದು 11 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ರಾಯಚೂರಿನಲ್ಲಿ ಜರುಗಿದೆ.

ಸದ್ದಾಂ(17)ಎಂಬ ಯುವಕ ಮೃತಪಟ್ಟಿದ್ದಾನೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ತೆರಬಾವಿ-ಬುದ್ದಿನ್ನಿ ಗ್ರಾಮದ ಮಧ್ಯದಲ್ಲಿ ಘಟನೆ ಸಂಭವಿಸಿದ್ದು ಮಟ್ಟೂರು ಗ್ರಾಮದಿಂದ ಅಮರೇಶ್ವರಕ್ಕೆ ಮದುವೆಗಾಗಿ ತೆರಳುತ್ತಿದ್ದಾಗ ವಿದ್ಯುತ್ ತಂತಿ ತಗುಲಿದೆ. ಲಾರಿಯ ಕ್ಯಾಬಿನ್ ಮೇಲೆ ಕುಳಿತಿದ್ದ ಹಲವರಿಗೆ ವಿದ್ಯುತ್ ತಂತಿ ತಗುಲಿದ ತಕ್ಷಣ ವಿದ್ಯುತ್ ತಂತಿ ಹರಿದು ಲಾರಿಯಲ್ಲಿದ್ದ ಸುಮಾರು 100ಕ್ಕೂ ಅಧಿಕ ಜನರ ಪೈಕಿ 11ಕ್ಕೂ ಹೆಚ್ಚಿನ ಜನರ ಮೇಲೆ ವಿದ್ಯುತ್ ತಂತಿ ಹರಿದು ಹೋದ ಕಾರಣ ಗಂಭೀರ ಸುಟ್ಟಗಾಯಗಳಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

ಹಲವು ಮಕ್ಕಳಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಲಿಂಗಸುಗೂರು ತಾಲೂಕು ಆಸ್ಪತ್ರೆಗೆ ರವಾನಿಸಿಲಾಗಿದ್ದು ಆಸ್ಪತ್ರೆಯಲ್ಲಿ ಸದ್ದಾಂ ಎಂಬ ಯುವಕ ಮೃತಪಟ್ಟಿದ್ದಾನೆ. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಈ ಕುರಿತಂತೆ ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Raichuru, lorry,electric lane,One death, 11 people serious

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ