ನೀತಿ ಸಂಹಿತೆ ಉಲ್ಲಂಘನೆ ಆರೋಪ: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರಿಗೆ ನೋಟಿಸ್​

ಹಾಸನ:ಏ-೯: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಹಿನ್ನಲೆಯಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರಿಗೆ ನೋಟಿಸ್​ ನೀಡಲಾಗಿದೆ.

ಬಗರ್​ ಹುಕುಂ ಸಾಗುವಳಿದಾರರ ಭೂಮಿ ಸಕ್ರಮಕ್ಕೆ ಅಂಕಿತ ಹಾಕಿದ್ದಕ್ಕಾಗಿ ಸಚಿವರಿಗೆ ಅರಕಲಗೂಡು ಚುನಾವಣಾ ಅಧಿಕಾರಿ ನೋಟಿಸ್​ ನೀಡಿದ್ದು, 2 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದ್ದಾರೆ.

ಎ. ಮಂಜು ಅವರು ಸಭೆ ನಡೆಸದೆ 800 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದ ಆರೋಪ ಕೇಳಿ ಬಂದಿದೆ. ಜತೆಗೆ ಅರ್ಜಿಗಳನ್ನು ತಿದ್ದಿ ಅನರ್ಹರಿಗೆ ಸಾಗುವಳಿ ಚೀಟಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ ಹಿಂದಿನ ದಿನಾಂಕದಲ್ಲಿ ಸಭೆ ನಡೆಸಿರುವುದಾಗಿ ಸಹಿ ಮಾಡಿರುವುದು ತನಿಖೆಯಿಂದ ಬಯಲಾಗಿದೆ ಎಂದು ತಿಳಿದು ಬಂದಿದೆ.

ಜಿಲ್ಲಾ ಚುನಾವಣಾ ಅಧಿಕಾರಿ ರೋಹಿಣಿ ಅವರ ಆದೇಶದಂತೆ ಅರಕಲಗೂಡು ಆರ್.ಒ. ವೆಂಕಟರಾಮ ರೆಡ್ಡಿ ನೇತೃತ್ವದಲ್ಲಿ ತನಿಖೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ.

Assembly Election,A Manju, Hassan,code of conduct,Notice

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ