ಸಿಡಿಲು ಬಡಿದು 6 ಕುರಿ ಸಾವು

ರಾಯಚೂರು:ಏ-8: ಸಿಡಿಲು ಬಡಿದು 6 ಕುರಿಗಳು ಸಾವನಪ್ಪಿದ ಘಟನೆ ರಾಯಚೂರಿನಲ್ಲಿ ನಡೆದಿದೆ.

ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದ ಅಮರಪ್ಪ ವಗ್ಗರ ಎನ್ನುವವರಿಗೆ ಸೇರಿದ ಕುರಿಗಳು ಸಾವನಪ್ಪಿವೆ.ಹೊಲದಲ್ಲಿ ಬೀಡುಬಿಟ್ಟಾಗ ನಿನ್ನೆ ರಾತ್ರಿ ಸಿಡಿಲು ಬಡಿದಿದೆ.ಈ ವೇಳೆ 6 ಕುರಿಗಳು ಬಲಿಯಾಗಿವೆ.

ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಸಾವನಪ್ಪಿದ ಕುರಿಗಣಲಿಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಲಿಂಗಸೂಗೂರು ಪೊಲೀಸ್ ಠಾಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur,6 sheep Death,struck by thunder

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ