ಬಿಜೆಪಿ ಪಕ್ಷದ ಚಿಹ್ನೆ ಇರುವ ವಾಹನ ಜಪ್ತಿ

ರಾಯಚೂರು:ಏ-೮: ಅನುಮತಿ ಪಡೆಯದೇ ವಾಹನ ಹಿಂಬಾಗದಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಅಂಟಿಸಿದ ಕಾರಣ ನೀತಿ ಸಂಹಿತೆ ಉಲ್ಲಂಘನೆಯಡಿ ವಾಹನವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಬಿಜಾಪೂರ ಮೂಲದ ಶ್ರೀಶೈಲ ಎನ್ನುವವರರಿಗೆ ಸೇರಿದ ಸ್ಕಾರ್ಪಿಯೋ ವಾಹನ ಇದಾಗಿದ್ದು. ನಿನ್ನೆ ರಾತ್ರಿ ಆಂದ್ರ ಪ್ರದೇಶದಿಂದ ಬಿಜಾಪೂರಗೆ ತೆರಳುವ ದಾರಿ ಮದ್ಯದಲ್ಲಿ ರಾಯಚೂರುನಲ್ಲಿ ಪೋಲಿಸರು ಸ್ಕಾರ್ಪಿಯೋ ವಾಹನವನ್ನು ಜಪ್ತಿಮಾಡಿದ್ದಾರೆ.

ಈ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur, BJP symbol, code of conduct violation, Scorpio vehicle seized

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ