ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಗೆ ತಮಿಳು ಚಿತ್ರರಂಗದ ಬೆಂಬಲ: ಧರಣಿಯಲ್ಲಿ ಭಾಗಿಯಾದ ರಜನಿ ಕಾಂತ್, ಕಮಲ್ ಹಾಸನ್

ಚೆನ್ನೈ :ಏ-8: ಕಾವೇರಿ ನದಿ ನೀರು ಹಂಚಿಕೆ ವಿವಾದ ಹಿನ್ನೆಲೆಯಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತಮಿಳು ಚಿತ್ರರಂಗ ಬೆಂಬಲ ನೀಡಿದೆ.

ನುಗಂಬಾಕ್ಕಂನಲ್ಲಿ ಸಾಂಕೇತಿಕವಾಗಿ ಇಂದು ತಮಿಳು ಸಿನಿಮಾ ನಟ-ನಟಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ದಕ್ಷಿಣ ಭಾರತ ಕಲಾವಿದರ ಸಂಘದಿಂದ ಪ್ರತಿಭಟನೆ ನಡೆಸುತ್ತಿದ್ದು, ಸೂಪರ್ ಸ್ಟಾರ್ ಗಳಾದ ರಜನಿಕಾಂತ್, ಕಮಲ್ ಹಾಸನ್, ಧನುಷ್, ವಿಜಯ್ , ಶಿವಕಾರ್ಥಿಕೇಯ್ಯನ್, ಉದಯ್, ಆರತಿ ಗಣೇಶ್, ಸಂಗೀತ ನಿರ್ದೇಶಕ ಶಂಕರ್ ಗಣೇಶ್, ನಿರ್ದೇಶಕ ಆರ್.ಕೆ.ಸೆಲ್ವಮಣಿ ಸೇರಿದಂತೆ ಹಲವಾರು ಕಲಾವಿದರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.


ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ನಟ ನಾಸೀರ್, ಸ್ವಾರ್ಥವನ್ನು ಬದಿಗಿಟ್ಟು ಕಾವೇರಿಗಾಗಿ ಯಾರೆಲ್ಲಾ ಪ್ರತಿಭಟನೆ ನಡೆಸುತ್ತಿದ್ದಾರೆ ಅವರಿಗೆಲ್ಲಾ ತಮಿಳು ಸಿನಿಮಾರಂಗ ಸಲ್ಯೂಟ್ ಮಾಡುತ್ತಿದೆ ಎಂದರು. ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರದ ಬೇಡಿಕೆಗೆ ಸ್ಪಂದಿಸಬೇಕು. ಕಾವೇರಿ ನಿರ್ವಹಣಾ ಮಂಡಳಿ ತಮಿಳುನಾಡಿನ ಹಕ್ಕು, ದುರಾಸೆಯಲ್ಲ ಎಂದು ಹೇಳಿದರು.

ಇನ್ನು ಪ್ರತಿಭಟನಾ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

Cauvery board protest,sRajinikanth, Kamal Haasan, Dhanush join

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ