ಅನುಮತಿ ಪಡೆಯದೆ ಕಾರಿನ ಹಿಂಭಾಗದಲ್ಲಿ ಬಿಜೆಪಿ ಪಕ್ಷ ಚಿಹ್ನೆ ವಾಹನವನ್ನು ವಶ:

ರಾಯಚೂರು, ಏ.8- ಅನುಮತಿ ಪಡೆಯದೆ ಕಾರಿನ ಹಿಂಭಾಗದಲ್ಲಿ ಬಿಜೆಪಿ ಪಕ್ಷ ಚಿಹ್ನೆ ಲಗತ್ತಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಪೆÇಲೀಸರು ವಾಹನವನ್ನು ವಶಕ್ಕೆ ಪಡೆದ ಘಟನೆ ಇಂದುಬೆಳಗ್ಗೆ ನಗರದಲ್ಲಿ ನಡೆದಿದೆ. ಬಿಜಾಪುರ ಮೂಲದ ಶ್ರೀ ಶೈಲ ಎಂಬುವರಿಗೆ ಸೇರಿದ ಸ್ಕಾರ್ಪಿಯೋ ಕಾರು ಕಳೆದ ರಾತ್ರಿ ಆಂಧ್ರಪ್ರದೇಶದಿಂದ ರಾಯಚೂರು ಮಾರ್ಗವಾಗಿ ಬಿಜಾಪುರಕ್ಕೆ ಹೋಗುವಾಗ ಚೆಕ್‍ಪೆÇೀಸ್ಟ್ ಬಳಿ ವಾಹನವನ್ನು ತಡೆದು ವಿಚಾರಿಸಿದ್ದಾರೆ.
ಆಗ ಅವರು ಪಕ್ಷದ ಚಿಹ್ನೆ ಬಳಸಿಕೊಳ್ಳಲು ಯಾವುದೇ ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ವಾಹನವನ್ನು ಜಪ್ತಿ ಮಾಡಲಾಗಿದೆ.  ಈ ಬಗ್ಗೆ ಮಾರ್ಕೆಟ್ ಯಾರ್ಡ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ