ಮೆಟ್ರೋದಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ

ಬೆಂಗಳೂರು:ಏ-8: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ಎಂ.ಜಿ ರಸ್ತೆಯವರೆಗೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು.

ರಾಹುಲ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಮಲ್ಲಿಕಾರ್ಜುನ ಖರ್ಗೆ, ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಸಚಿವ ಕೆ.ಜೆ ಜಾರ್ಜ್‌ ಸೇರಿದಂತೆ ಹಲವು ಮುಖಂಡರು ಸಾಥ್‌ ನೀಡಿದರು.

ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ಮುಖಂಡರಿಗೆ ಮುಖ್ಯಮಂತ್ರಿ ಟಿಕೆಟ್‌ ಖರೀದಿಸಿದರು ಎಂದು ಹೇಳಲಾಗಿದೆ.

ವಿಧಾನಸೌಧದಿಂದ ಎಂ.ಜಿ.ರಸ್ತೆಯವರೆಗೆ ಮೆಟ್ರೊದಲ್ಲಿ ಬಂದ ರಾಹುಲ್, ಚರ್ಚ್ ರಸ್ತೆಯ ‘ಬುಕ್ ವರ್ಮ್’ ಸ್ಟೋರ್‌ಗೆ ಭೇಟಿ ಕೊಟ್ಟರು. ಈ ವೇಳೆ ರಾಹುಲ್ ಗಾಂಧಿಯವರ ಐದು ಪುಸ್ತಕಗಳನ್ನು ಖರೀದಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಹುಲ್ ಗಾಗಿ ಪುಸ್ತಕದ ಹಣವನ್ನು ಪಾವತಿ ಮಾಡಿದರು.

Assembly election,Rahul Gandhi,Bengaluru,Namma metro

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ