ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುª ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ : ಬಿ.ಎಸ್.ಯಡಿಯೂರಪ್ಪ ಭರವಸೆ

ಬೆಂಗಳೂರು, ಏ.6-ಸೂಕ್ಷ್ಮ,, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಕಾಸಿಯಾ ಸಭಾಂಗಣದಲ್ಲಿ ನಿನ್ನೆ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತರುವಲ್ಲಿ ಪ್ರಯತ್ನಿಸುತ್ತೇನೆ. ನೂತನ ಸರ್ಕಾರದಲ್ಲಿ ತಮ್ಮೆಲ್ಲರ ನಿವೇದನೆಗಳಿಗೆ ಪರಿಹಾರ ದೊರೆಯಲಿದೆ ಎಂದರು.

ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಕಾಸಿಯಾ ಬೆಳವಣಿಗೆಯಲ್ಲಿ ನನ್ನ ಸಕ್ರೀಯ ಬೆಳವಣಿಗೆಯೂ ಇದೆ. ಎಂ.ಎಸ್.ಎಂ.ಇ ಯ ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳಲು ನೂತನ ಸರ್ಕಾರದ ಸಂಕಲ್ಪವಾಗಿದೆ. ಯಡಿಯೂರಪ್ಪ ರವರು ನಿಂತ ನೀರಲ್ಲ ಹರಿಯುವ ನೀರು, ಸಣ್ಣ ಕೈಗಾರಿಕೆಗಳು ರಾಜ್ಯದ ಆರ್ಥಿಕ ಬೆನ್ನಲುಬು, ರೈತ ಕೃಷಿಗೆ ಬೆನ್ನಲುಬು, ಪ್ರಸ್ತುತ ಪರಿಸ್ಥಿಯಲ್ಲಿ ದೇಶವು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿರವರ 4 ವರ್ಷದ ಸಾಧನೆಗಳು, ಯೋಜನೆಗಳು, ವಿಶ್ವವನ್ನೆ ಬೆರಗುಗೊಳಿಸುವಂತಿವೆ ಎಂದರು.
ಕೇಂದ್ರ ಸಚಿವ ಅನಂತ್ ಕುಮಾರ್ ರವರು ಕಾಸಿಯಾದ ಸರ್ವಾಂಗೀಣ ಬೆಳವಣಿಗೆಗೆ ಪ್ರಮುಖರಾಗಿದ್ದಾರೆ. ತಾವೆಲ್ಲರೂ ಒಟ್ಟಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಒತ್ತು ನೀಡಲು ಪ್ರಧಾನಿಯವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.

ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಮಂಡನೆಗೆ ಮುನ್ನ 2500 ಕೋಟಿ ರೂಪಾಯಿಗಳನ್ನು ಅನುದಾನವಾಗಿ ಕೋರಿಕೊಳ್ಳಲಾಗಿತ್ತು. ಪ್ರಧಾನಿಯವರು ನಮ್ಮ ಮನವಿಗೆ ಸ್ಪಂದಿಸಿ 2165 ಕೋಟಿ ರೂಗಳನ್ನು ಬಿಡುಗಡೆ ಮಾಡಿ ರೇಷ್ಮೆ ಉದ್ದಿಮೆದಾರರಿಗೆ ಪೆÇ್ರೀ ನೀಡಿ ಅನುಕೂಲ ಕಲ್ಪಿಸಿದ್ದಾರೆ. ಕಾಸಿಯಾ ಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ ಡಾ.ಎನ್.ವಾಮನಾಚಾರ್ಯ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ದಿಗೆ ಅಪ್ರತಿಮ ನಾಯಕ ಪ್ರಧಾನಮಂತ್ರಿಯವರು ಕೈಗೊಳ್ಳುತ್ತಿರುವ ವಿವಿಧ ಯೋಜನೆಗಳನ್ನು ನೂತನ ಸರ್ಕಾರ ಜಾರಿಗೊಳಿಸಲು ಬದ್ದವಾಗಿದೆ ಅನುಭವಿತಜ್ಞ ಯಡಿಯೂರಪ್ಪ ನವರ ಕೈ ಬಲಪಡಿಸಿರಿ ದೇಶದಲ್ಲಿ 54 ಲಕ್ಷ ಕೋಟಿ ಎನ್.ಪಿ.ಎ ರವರು ಇದ್ದಾರೆ. ಇದು ಭವಿಷ್ಯದಲ್ಲಿ ದೇಶದ ಅಭಿವೃದ್ದಿ ದೃಷ್ಟಿಯಿಂದ ಮಾರಕವಾಗಿದೆ. ಧರ್ಮದ ಹೆಸರಿನಲ್ಲಿ ದೇಶ, ರಾಜ್ಯ ಒಡೆಯಬಾರದು ಎಂದರು.
ಸಣ್ಣ ಕೈಗಾರಿಕೆಗಳು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಸಂಸತ್ತಿನಲ್ಲಿ ಬಾಕಿ ಉಳಿದಿರುವ ಕಾರ್ಮಿಕ ಸಂಬಂಧಿತ ಕೆಲವು ಕ್ಲಿಷ್ಟಕರ ಕಾಯ್ದೆಗಳನ್ನು ಸರಳೀಕರಣಗೊಳಿಸುವ ಸಣ್ಣ ಕಾರ್ಖಾನೆಗಳ ಮಸೂದೆಯ ಶೀಘ್ರ ಅಂಗೀಕಾರ ಎಂ.ಎಸ್.ಎಂ.ಇ ಗಳಿಗೆ ನೀಡುವ ಸಾಲದ ಬಡ್ಡಿಯನ್ನು ಶೇ.4ಕ್ಕೆ ನಿಗಧಿಪಡಿಸುವ ಜಿ.ಎಸ್.ಟಿ ರಿಟನ್ಸ್ ಸರಳೀಕರಣ ತೆರಿಗೆ ದರಗಳ ಅಸಮಾನತೆ ನಿವಾರಣೆ ಕೇಂದ್ರದೋದ್ಯಮಗಳು ಎಂ.ಎಸ್.ಎಂ.ಇ ಗಳಿಂದ ನಿಗಧಿತ ಪ್ರಮಾಣದಲ್ಲಿ ಖರೀದಿಸುವುದನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸುವ ನಿವೇದನಾ ಪತ್ರವನ್ನು ಸಮರ್ಪಿಸಿದರು.

ಕಾಸಿಯಾದ ಎ.ಪದ್ಮನಾಭ, ನಿಕಟಪೂರ್ವ ಅಧ್ಯಕ್ಷರು, ಗೌರವ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎಸ್. ಉಮಾಶಂಕರ್, ಬಸವರಾಜ್ ಎಸ್ ಜವಳಿ, ಗೌರವ ಉಪಾಧ್ಯಕ್ಷರು, ಲತಾ ಗಿರೀಶ್ ಗೌರವ ಜಂಟಿ ಕಾರ್ಯದರ್ಶಿಗಳು – ನಗರ, ಮಂಜುನಾಥ, ಗೌರವ ಜಂಟಿ ಕಾರ್ಯದರ್ಶಿಗಳು-ಗ್ರಾಮೀಣ, ಕೆ.ಬಿ.ಅರಸಪ್ಪ ಪ್ಯಾನಲ್ ಛೇರ್‍ಮನ್, ರಾಜಕೀಯ ವಿಚಾರಗಳು ಸಮಿತಿ, ಕಾಸಿಯಾ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ