ಕನಕಪುರದ ಬಳಿ `ಕಾಂಟ್ರಾಕ್ಟ್’ ಹಾಡು

ಸಮೀರ್ ಪ್ರೊಡಕ್ಷನ್ ಲಾಂಛನದಲ್ಲಿ ಸಮೀರ್ ಅವರು ನಿರ್ಮಿಸಿರುವ `ಕಾಂಟ್ರಾಕ್ಟ್’ ಚಿತ್ರಕ್ಕಾಗಿ ಶಶಿ ಅವರು ಬರೆದಿರುವ `ಗಂಡು ಕೇಳದ ಸಂಭ್ರಮದ ಮ್ಯಾಟರ್ ತಂದಿರುವೆ’ ಎಂಬ ಹಾಡಿನ ಚಿತ್ರೀಕರಣ ಕನಕಪುರದ ಬಳಿಯಿರುವ ಕಗ್ಗಲಿಪುರದಲ್ಲಿ ನಡೆದಿದೆ. ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಜೆ ಡಿ, ರಾಂಜಗನ್, ಸಮೀರ್, ಹಿರಿಯ ನಿರ್ದೇಶಕ ಕೆ.ವಿಶ್ವನಾಥ್ ಹಾಗೂ 200ಕ್ಕೂ ಅಧಿಕ ನೃತ್ಯ ಕಲಾವಿದರು ಅಭಿನಯಿಸಿದ ಈ ಹಾಡಿಗೆ ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೂರು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆದಿದೆ.

ಚಿತ್ರದ ನಿರ್ಮಾಪಕರಾಗಿರುವ ಸಮೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸುಭಾಷ್ ಆನಂದ್ ಅವರ ಸಂಗೀತ ನಿರ್ದೇಶನವಿದೆ. ಅಮೀರ್‍ಲಾಲ್ ಛಾಯಾಗ್ರಹಣ, ಮಧುರೆಡ್ಡಿ ಸಂಕಲನ, ಅಮರ್ ರಾಜಶೇಖರ್ ಸಾಹಸ ನಿರ್ದೇಶನ, ರಘು ಕುಲಕರ್ಣಿ ಕಲಾ ನಿರ್ದೇಶನ ಹಾಗೂ ಅಮ್ಮ ರಾಜಶೇಖರ್ ಅವರ ನೃತ್ಯ ನಿರ್ದೆಶನ ಈ ಚಿತ್ರಕ್ಕಿದೆ.
ಅರ್ಜುನ್ ಸರ್ಜಾ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ರಾಧಿಕಾ, ಜೆ.ಡಿ.ಚಕ್ರವರ್ತಿ, ಅಮೀರ್ ಖಾನ್ ಸಹೋದರ್ ಫೈಸಲ್ ಖಾನ್, ಸಮೀರ್ ಮುಂತಾದವರು ಅಭಿನಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ