ನಟಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದ ಟೈರ್ ಸ್ಫೋಟ, ಮುಂದೇನಾಯ್ತು?

ಹೈದರಾಬಾದ್: ನಟಿ ಮತ್ತು ವೈಎಸ್‍ಆರ್ ಶಾಸಕಿ ರೋಜಾ ಪ್ರಯಾಣಿಸುತ್ತಿದ್ದ ವಿಮಾನದ ಟೈರ್ ಸ್ಫೋಟಗೊಂಡಿರುವ ಘಟನೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ವಿಮಾದಲ್ಲಿ ನಾಲ್ಕು ಸಿಬ್ಬಂದಿ ಸೇರಿದಂತೆ ಇತರೆ 72 ಪ್ರಯಾಣಿಕರು. ಅದೃಷ್ಟವಶಾತ್ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಫ್ಲೈಟ್ 6ಎಫ್ 7117 ಎಟಿಆರ್(ಏಕ್ರಾಫ್ಟ್) ತಿರುಪತಿಯಿಂದ ಹೈದರಾಬಾದ್ ಗೆ ಪ್ರಯಾಣ ಬೆಳೆಸಿತ್ತು. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕದಾಗ ಸಂದರ್ಭದಲ್ಲಿ ವಿಮಾನದ ಟೈರ್ ಸ್ಫೋಟಗೊಂಡಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 72 ಪ್ರಯಾಣಿಕರು, ಒಂದು ಮಗು ಮತ್ತು ನಾಲ್ಕು ಸಿಬ್ಬಂದಿಯ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು ಎಂದು ಇಂಡಿಗೋ ವಿಮಾನ ಸಂಸ್ಥೆ ತಿಳಿಸಿದೆ.

ಈ ಘಟನೆ ಬುಧವಾರ ರಾತ್ರಿ 11.25 ಕ್ಕೆ ಸಂಭವಿಸಿದೆ. ಈ ಘಟನೆಯಿಂದ ಅಲ್ಲಿನ ಜನರು ಭಯಗೊಂಡಿದ್ದರು. ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ತಂಡವು ಧಾವಿಸಿ ಯಾರಿಗೂ ತೊಂದರೆಯಾಗದಂತೆ ಪ್ರಯಾಣಿಕರನ್ನ ರಕ್ಷಿಸಿದ್ದಾರೆ.

ಪೈಲಟ್ ಪ್ರಯಾಣಿಕರನ್ನು ಶಾಂತವಾಗಿರಲು ಮತ್ತು ಕುಳಿತುಕೊಳ್ಳುವಂತೆ ಸಲಹೆ ನೀಡಿದ್ದರು ಎಂದು ವಿಮಾನದಿಂದ ಸುರಕ್ಷಿತವಾಗಿ ಬಂದ ಪ್ರಯಾಣಿಕರು ತಿಳಿಸಿದ್ದಾರೆ.

ಬೆಂಗಳೂರಿನಿಂದ ವಿಜಯವಾಡಕ್ಕೆ ಬರುತ್ತಿದ್ದ ಮತ್ತೊಂದು ಇಂಡಿಗೋ ವಿಮಾನ 6ಇ-7204, ಕಳೆದ ರಾತ್ರಿ ರನ್ ವೇ ಯಲ್ಲಿ ಸ್ಕೀಡ್ ಆಗಿತ್ತು ಎಂದು ಖಾಸಗಿ ಮಾಧ್ಯಮವೊಂದು ತಿಳಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ