ನಟ ಅರ್ಜುನ್ ದೇವ್ ಹತ್ಯೆಗೆ ಸುಪಾರಿ: ಪೊಲೀಸರಿಗೆ ದೂರು ನೀಡಿ ರಕ್ಷಣೆಗೆ ಮನವಿ

ಬೆಂಗಳೂರು:ಮಾ-25: ಸ್ಯಾಂಡಲ್‌‌ವುಡ್‌‌ ನಟ, ಕಾಂಗ್ರೆಸ್ ಕಾರ್ಯಕರ್ತ ಅರ್ಜುನ್ ದೇವ್ ತನ್ನ ಹತ್ಯೆಗೆ ರೌಡಿಶೀಟರ್ ಕಾಸಿಫ್ ಎಂಬಾತನಿಗೆ ಸುಪಾರಿ ನೀಡಿದ್ದಾರೆ ಹಾಗಾಗಿ ತನಗೆ ರಕ್ಷಣೆ ನೀಡುವಂತೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅರ್ಜುನ್ ದೇವ್ ಕನ್ನಡದ ಯುಗಪುರಷ ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದೂರಿನ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರೌಡಿಶೀಟರ್ ಕಾಸಿಫ್‌‌ಗಾಗಿ ಹುಡುಕಾಟ ನಡೆಸಿದ್ದಾರೆ.

ರೌಡಿಶೀಟರ್ ಕಾಸಿಫ್ ತನ್ನ ಹತ್ಯೆಗೆ ವ್ಯಕ್ತಿಯೊಬ್ಬರಿಂದ ಸುಪಾರಿ ಪಡೆದಿದ್ದಾನೆ ಎಂಬ ವಿಚಾರ ಗೊತ್ತಾಯಿತು. ನನ್ನ ಹಿತೈಷಿಯೊಬ್ಬರು ಈ ವಿಚಾರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣೆ ನೀಡುವಂತೆ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ರೌಡಿಶೀಟರ್ ಕಾಸಿಫ್ ಈಗಾಗಲೇ ನನ್ನ ಮನೆ ಸುತ್ತ ಮುತ್ತ ಓಡಾಡಿ ಸಂಚು ನಡೆಸಿ ಹೋಗಿರುವ ಬಗ್ಗೆಯೂ ನನಗೆ ಗೊತ್ತಾಗಿದೆ ಎಂದು ವಿವರಿಸಿದ್ದಾರೆ.

ಈ ಸಂಬಂಧ ಐಪಿಸಿ ಸೆಕ್ಷನ್ 506 ಮತ್ತು 120 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ರೌಡಿ ಕಾಸಿಫ್‌ಗಾಗಿ ಹುಡುಕಾಟ ನಡೆಸಿದ್ದಾರೆ.

Kannada film actor and Congress party worker Arjun Dev,approaches police seeking protection, from supari killer

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ