ನಿರ್ಜನ ಪ್ರದೇಶದಲ್ಲಿ ಕಾರನ್ನು ಅಡ್ಡಗಟ್ಟಿ ಚಾಲಕರಿಂದ ಹಣ-ಆಭರಣ ಸುಲಿಗೆ

ಬೆಂಗಳೂರು, ಮಾ.24- ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ಮಹಿಳೆಯರ ವ್ಯಾನಿಟಿ ಬ್ಯಾಗ್‍ನಿಂದ ಆಭರಣಗಳನ್ನು ದೋಚುತ್ತಿದ್ದ ಹಾಗೂ ನಿರ್ಜನ ಪ್ರದೇಶದಲ್ಲಿ ಕಾರನ್ನು ಅಡ್ಡಗಟ್ಟಿ ಚಾಲಕರಿಂದ ಹಣ-ಆಭರಣ ಸುಲಿಗೆ ಮಾಡುತ್ತಿದ್ದ ಇಬ್ಬರು ಕುಖ್ಯಾತ ದರೋಡೆಕೋರರನ್ನು ಸಿದ್ದಾಪುರ ಠಾಣೆ ಪೆÇಲೀಸರು ಬಂಧಿಸಿ 3 ಲಕ್ಷ ರೂ. ಮೌಲ್ಯದ 115 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕುಮರೇಶನ್ (35) ಮತ್ತು ಮಣಿ (29) ಬಂಧಿತ ಆರೋಪಿಗಳಾಗಿದ್ದು, ಇವರಿಬ್ಬರು ಬಸ್‍ನಲ್ಲಿ ಓಡಾಡುವ ಮಹಿಳೆಯರ ವ್ಯಾನಿಟಿ ಬ್ಯಾಗ್‍ಗಳಿಂದ ಚಿನ್ನದ ಆಭರಣ ಕಳ್ಳತನ ಮಾಡುತ್ತಿದ್ದರು.
ಅಲ್ಲದೆ, ನಿರ್ಜನ ಪ್ರದೇಶದ ಬಳಿ ಹೋಗುವ ಕಾರುಗಳನ್ನು ತಡೆದು ಚಾಲಕರನ್ನು ಬೆದರಿಸಿ ಹಣ-ಆಭರಣ ಸುಲಿಗೆ ಮಾಡಿ ನಂತರ ಇವರಿಬ್ಬರು ಅವುಗಳನ್ನು ಹಂಚಿಕೊಳ್ಳುತ್ತಿದ್ದರು.

ಆಗಿಂದಾಗ್ಗೆ ಇಂತಹ ಪ್ರಕರಣಗಳು ವರದಿಯಾಗುತ್ತಿದ್ದ ಬಗ್ಗೆ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿ ಈ ಹಿಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿರುವ ಆರೋಪಿಗಳ ಬೆನ್ನತ್ತಿದಾಗ ಇವರಿಬ್ಬರು ಪೆÇಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಆರೋಪಿಗಳಿಂದ 3 ಲಕ್ಷ ರೂ. ಬೆಲೆಬಾಳುವ 115 ಗ್ರಾಂ ತೂಕದ ಮೂರು ಚಿನ್ನದ ಸರಗಳು, 1 ಉಂಗುರ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸಿದ್ದ ತಂಡವನ್ನು ನಗರ ಪೆÇಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ