ನಗರದ ಮೂರು ಕಡೆ ಮನೆ ಮುಂದೆ ನಿಲ್ಲಿಸಿದ್ದ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಭಾಗಶಃ

ಬೆಂಗಳೂರು, ಮಾ.24- ನಗರದ ಮೂರು ಕಡೆ ಮನೆ ಮುಂದೆ ನಿಲ್ಲಿಸಿದ್ದ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಭಾಗಶಃ ಹಾನಿಯಾಗಿರುವ ಘಟನೆ ವರದಿಯಾಗಿದೆ.
ಚಂದ್ರಾ ಲೇಔಟ್: ಬಿನ್ನಿ ಲೇಔಟ್‍ನ 3ನೆ ಮುಖ್ಯರಸ್ತೆ, 2ನೆ ಹಂತದ ಮನೆಯೊಂದರ ಮುಂದೆ ನಿಲ್ಲಿಸಲಾಗಿದ್ದ ಮೂರು ಬೈಕ್‍ಗಳಿಗೆ ಇಂದು ಬೆಳಗಿನ ಜಾವ 1.20ರಲ್ಲಿ ಬೆಂಕಿ ತಗುಲಿ ಹಾನಿಗೀಡಾಗಿವೆ.

ಜ್ಞಾನಭಾರತಿ: ನಾಗದೇವನಹಳ್ಳಿ 9ನೆ ಕ್ರಾಸ್‍ನ ವಂದನಾ ಹೊಟೇಲ್ ಸಮೀಪದ ನಿವಾಸಿಯೊಬ್ಬರ ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್‍ಗಳಿಗೆ ಇಂದು ಮುಂಜಾನೆ 2.30ರ ಸಮಯದಲ್ಲಿ ಬೆಂಕಿ ತಗುಲಿದ ಪರಿಣಾಮ ಭಾಗಶಃ ಹಾನಿಯಾಗಿವೆ.

ವಿಜಯನಗರ: ಆರ್‍ಪಿಸಿ ಲೇಔಟ್‍ನ 9ನೆ ಮುಖ್ಯರಸ್ತೆ, 8ನೆ ಕ್ರಾಸ್‍ನ ಮನೆಯೊಂದರ ಮುಂದೆ ನಿಲ್ಲಿಸಿದ್ದ ಒಂದು ಬೈಕ್‍ಗೆ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಬೆಂಕಿಯ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಬೈಕ್‍ನ ಬ್ಯಾಟರಿಗಳಿಂದ ಬೆಂಕಿ ಹೊತ್ತಿಕೊಂಡಿರಬಹುದೆ ಅಥವಾ ಇದು ಕಿಡಿಗೇಡಿಗಳ ಕೃತ್ಯವೇ ಎಂಬ ಬಗ್ಗೆ ಆಯಾ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ