ರಾಜಧಾನಿಯಲ್ಲಿ ಪುಂಡರಿಂದ ಅರೆನಗ್ನವಾಗಿ ಮೆರವಣಿಗೆ: ಕಾರಿನ ಮೇಲೆ ಕುಳಿತು ಮಧ್ಯರಾತ್ರಿ ಜಾಲಿ ರೈಡ್

ಬೆಂಗಳೂರು:ಮಾ-24: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಗುಂಪು ಮತ್ತೆ ತಮ್ಮ ಹಾವಳಿ ಶುರುವಿಟ್ಟುಕೊಂಡಿದೆ. ನಡುರಸ್ತೆಯಲ್ಲಿ ಅರೆ ನಗ್ನವಾಗಿ ಕಾರಿನ ಮೇಲೆ ಕುಳಿತು ಯುವಕರ ಗುಂಪೊಂದು ಮೆರವಣಿಗೆ ಮಾಡಿದ್ದಾರೆ.

ಯಶವಂತಪುರದಲ್ಲಿ ತಡರಾತ್ರಿ ಈ ಘಟನೆ ನಡೆದುದ್ದು, ಕಂಠಪೂರ್ತಿ ಕುಡಿದಿದ್ದ ಪೋಲಿ ಪುಂಡರ ಗುಂಪೊಂದು ಕಾರಿನ ಟಾಪ್ ಮೇಲೆ ಹತ್ತಿ ಶರ್ಟ್ ಬಿಚ್ಚಿ ಅರೆನಗ್ನವಾಗಿ ಕುಳಿತು ಜಾಲಿ ರೈಡ್ ಮಾಡಿದ್ದಾರೆ. ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸುತ್ತ ಸಾಗಿದ ಇವರು, ಬೇರಾವ ವಾಹನಗಳಿಗೂ ದಾರಿ ಬಿಡದೇ ಪುಂಡಾಟ ನಡೆಸಿದ್ದಾರೆ. ಈ ಪುಂಡರ ಹಾವಳಿಯನ್ನು ಸಾರ್ವಜನಿಕರೊಬ್ಬರು ಚಿತ್ರೀಕರಿಸಿಕೊಂಡಿದ್ದಾರೆ.

ಸಾರ್ವಜನಿಕವಾಗಿ ನಡುರಸ್ತೆಯಲ್ಲಿ ಯುವಕರ ಗುಂಪು ಹೀಗೆ ದುರ್ವರ್ತನೆ ಮೆರೆದು, ಮೆರವಣಿಗೆ ಮಾಡಿದರೂ ಪೊಲೀಸರಿಗೆ ಈ ಬಗ್ಗೆ ಗಮನಕ್ಕೆ ಬಂದಿಲ್ಲವೇ..? ಎಂಬುದು ಸಾರ್ವಜನಿಕರ ಆಕ್ರೋಶ.

ಈ ವಿಡಿಯೋ ಆಧರಿಸಿ ಪೊಲೀಸರು ಕಾರಿನ ಮಾಲೀಕರು ಮತ್ತು ಪುಂಡರಿಗಾಗಿ ಹುಡುಕಾಟ ನಡೆಸಿದ್ದಾರೆ.

Bangalore,Youth,Misbehave,Road ride

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ