ವೀರಶೈವ ಮಹಾಸಭಾ ಶಾಮನೂರು ಶಿವಶಂಕ್ರಪ್ಪನವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡಿತು:

ವೀರಶೈವ ಮಹಾಸಭೆಯು “ವೀರಶೈವ-ಲಿಂಗಾಯತ” ಎಂದೆ ಪ್ರತೇಕ ಧರ್ಮವಾಗಬೇಕು ಎಂದು ತೀರ್ಮಾನಿಸಿದೆ. ಮತ್ತು ಅಲ್ಪಸಂಖ್ಯಾತ ಸ್ಥಾನಮಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದೆ. ಎರಡೂ ಪಕ್ಷಗಳು ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತವೆ ಎಂದು ಕಾದು ನೋಡಬೇಕಾಗಿದೆ. ಈ ನಿಟ್ಟಿನಲ್ಲಿ ವೀರಶೈವ ಮಹಾಸಭಾ ಶಾಮನೂರು ಶಿವಶಂಕ್ರಪ್ಪನವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡಿತು. ಸಭೆಯ ನಿರ್ಣಯಗಳು : * ರಾಜ್ಯ ಸರಕಾರವು ಅಲ್ಪಸಂಖ್ಯಾತರ ಕಾಯ್ದೆ 2ಡಿ ಅಡಿಯಲ್ಲಿ ನಮ್ಮ ಮನವಿಯನ್ನು ಪುರಸ್ಕರಿಸಬೇಕು. * ಮಹಾಸಭೆಯು 2013 ರಲ್ಲಿ ಕೇಂದ್ರ ಸರ್ಕಾರಕ್ಕೆ ‘ವೀರಶೈವ- ಲಿಂಗಾಯತ ಧರ್ಮಕ್ಕೆ ಪ್ರತೇಕ ಧರ್ಮದ ಮಾನ್ಯತೆ ನೀಡುವಂತೆ ಶಿಫಾರಸ್ಸು. * ಅಲ್ಪಸಂಖ್ಯಾತರ ಸ್ಥಾನಮಾನ ನೀಡುವದಾದರೆ ನಮ್ಮ ಸಮುದಾಯಕ್ಕೂ ಸಕಲ ಸೌಲಭ್ಯಗಳನ್ನು ನೀಡಬೇಕು.
* 2013ರಲ್ಲಿ ಮಹಾಸಭೆಯು ಕೇಂದ್ರ ಸರ್ಕಾರಕ್ಕೆ ‘ ಪ್ರತೇಕ ಧರ್ಮದ ಮಾನ್ಯತೆ’ಗಾಗಿ ಸಲ್ಲಿಸಿದ್ದ ಮನವಿ ಪರೀಶೀಲನೆಯ ಹಂತದಲ್ಲಿದೆ, ಇದು ತಿರಸ್ಕøತವಾಗಿಲ್ಲ. * ಕೇಂದ್ರ ಸರ್ಕಾರದ ಮುಂದಿರುವ ಪ್ರತೇಕ ಧರ್ಮದ ಮಾನ್ಯತೆಯನ್ನು ನೀಡಲು ರಾಜ್ಯ ಸರ್ಕಾರ ಒತ್ತಾಯಿಸಬೇಕು. * ವೀರಶೈವ- ಲಿಂಗಾಯತ ಬೇದ ನಮಗಿಲ್ಲ, ವಾದ ವಿವಾದಗಳೂ ನಮಗೆ ಬೇಕಿಲ್ಲ, ಸಮಾಜ ಸಂಘಟನೆಯೇ ನಮ್ಮ ಗುರಿ ಯಾರು ಗೊಂದಲಕ್ಕೆ ಒಳಗಾಗಬಾರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ