ಜಿಲ್ಲೆಯಿಂದಲೇ ರಾಜಕೀಯ ಜಿದ್ದಾಜಿದ್ದಿ ಅಖಾಡ ಆರಂಭವಾಗಲಿ. ಬನ್ನಿ ನಾವಾ… ನೀವಾ… , ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ:

ಮೈಸೂರು, ಮಾ.22- ಜಿಲ್ಲೆಯಿಂದಲೇ ರಾಜಕೀಯ ಜಿದ್ದಾಜಿದ್ದಿ ಅಖಾಡ ಆರಂಭವಾಗಲಿ. ಬನ್ನಿ ನಾವಾ… ನೀವಾ… ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.
ನಗರದ ಕೆ.ಜಿ.ಕೊಪ್ಪಲಿನಲ್ಲಿರುವ ಶ್ರೀರಾಮಮಂದಿರದ 10ದಿನಗಳ ಗರಡಿ ಉದ್ಘಾಟಿಸಿ ಮಾತನಾಡಿದ ಅವರು, ಹಾಸನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ವಯಸ್ಸಾಗಿದೆ ಎಂದು ಹೇಳಿದ್ದಾರೆ. ನನಗೀಗ 88 ವರ್ಷ ಎಂದರು.
ನಾನು ಈ ಹಿಂದೆ ಗರಡಿ ಪೂಜೆ ನಂತರವೇ ರಾಜಕೀಯ ಅಖಾಡಕ್ಕಿಳಿದಿದ್ದೆ. ಹಾಗಾಗಿ ನನಗೀಗ ವಯಸ್ಸಾಗಿದ್ದರೂ ಮೈಸೂರಿನಲ್ಲಿಂದು ಗರಡಿ ಉದ್ಘಾಟಿಸಿದ್ದೇನೆ. ಬನ್ನಿ ನಾವಾ… ನೀವಾ… ನೋಡೋಣ ಎಂದು ಹೇಳಿದರು.
ಇಂದಿನಿಂದಲೇ ರಾಜಕೀಯ ಜಿದ್ದಾಜಿದ್ದಿ ಪ್ರಾರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದು ಬೇಕಾದಷ್ಟಿದೆ ಎಂದು ಮಾರ್ಮಿಕವಾಗಿ ನುಡಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ