ಬಹುಅಂಗಾಂಗ ವೈಫಲ್ಯದಿಂದ ಶಶಿಕಲಾ ಪತಿ ನಟರಾಜನ್ ವಿಧಿವಶ: ಪೆರೋಲ್‌ ಮೇಲೆ ಶಶಿಕಲಾ ಬಿಡುಗಡೆ

ಚೆನ್ನೈ:ಮಾ-20: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಶಿಕ್ಷೆಗೊಳಗಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ಪತಿ ಮಾರುತಪ್ಪನ್‌ ನಟರಾಜನ್‌ ಅವರು ಬಹುಅಂಗಾಂಗ ವೈಫ‌ಲ್ಯದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ನಟರಾಜನ್ ಅವರನ್ನು ಚೆನ್ನೈನ ಗ್ಲೆನೇಗಲ್‌ ಗ್ಲೋಬಲ್‌ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ನಸುಕಿನ 1.30 ರ ವೇಳೆಗೆ ವಿಧಿವಶರಾಗಿದ್ದಾರೆ. ಪತಿ ನಿಧನ ಹಿನ್ನಲೆಯಲ್ಲಿ ಶಶಿಕಲಾ ಪೆರೋಲ್‌ ಮೇಲೆ ಚೆನ್ನೈಗೆ ತೆರಳುತ್ತಿರುವುದಾಗಿ ತಿಳಿದು ಬಂದಿದೆ.

ಶಶಿಕಲಾ ಚೆನ್ನೈಗೆ ತೆರಳಿದ ಬಳಿಕವೇ ಅಂತ್ಯ ಸಂಸ್ಕಾರ ನಡೆಸುವುದಾಗಿ ಕುಟುಂಬ ಮೂಲಗಳು ತಿಳಿಸಿವೆ. ಪೆರೋಲ್‌ಗಾಗಿ ಮನವಿ ಸಲ್ಲಿಸಿದ ಕೂಡಲೇ ತುರ್ತಾಗಿ ಕಳುಹಿಸಿಕೊಡಲಾಗುತ್ತದೆ ಎಂದು ಜೈಲು ಅಧೀಕ್ಷಕರು ತಿಳಿಸಿದ್ದಾರೆ.

AIADMK,V K Sasikala’s husband,m natarajan,dies

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ