ಸಿಡಿಲು ಬಡಿದು ಟಿವಿ ಸ್ಫೋಟ

ಚಿಕ್ಕಮಗಳೂರು, ಮಾ.16- ಸಿಡಿಲು ಬಡಿದು ಟಿವಿ ಸ್ಫೋಟಗೊಂಡು ಮನೆ ಸಂಪೂರ್ಣ ಸುಟ್ಟು ಹೋಗಿರುವ ಘಟನೆ ಬಾಳೆಹೊನ್ನೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಿನ್ನೆ ರಾತ್ರಿ ಜಿಲ್ಲೆಯ ಬಾಳೆಹೊನ್ನೂರು ಗ್ರಾಮದಲ್ಲಿ ಸಿಡಿಲು ಸಹಿತ ಮಳೆ ಸುರಿದಿದ್ದು, ಈ ವೇಳೆ ಅವಿನಾಶ್ ಎಂಬುವರ ಮನೆಯ ಟಿವಿಗೆ ಸಿಡಿಲು ಬಡಿದು ಸ್ಫೋಟಗೊಂಡಿದೆ.
ಟಿವಿಯಿಂದ ಕಾಣಿಸಿಕೊಂಡ ಬೆಂಕಿ ಮನೆಯನ್ನು ಆವರಿಸಿದ್ದು, ತಕ್ಷಣ ಎಚ್ಚೆತ್ತುಕೊಂಡ ಮನೆಯವರು ಹೊರಗೆ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿದ್ದು, ಅದೃಷ್ಟವಸಾತ್ ಮನೆಯವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಈ ಸಂಬಂಧ ಬಾಳೆಹೊನ್ನೂರು ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ