ಯುಎಫ್‍ಒ ಮತ್ತು ಕ್ಯೂಬ್ ಡಿಜಿಟಲ್ ಸರ್ವೀಸ್ ಪ್ರೊವೈಡರ್ ಸಂಸ್ಥೆ ಗೊಂದಲಕ್ಕೆ ತಾತ್ಕಾಲಿಕ ತೆರೆ: ಈ ವಾರದಿಂದ ಕನ್ನಡದ ಹೊಸ ಚಿತ್ರಗಳು ತೆರೆಗೆ

ಬೆಂಗಳೂರು,ಮಾ.13- ಡಿಜಿಟಲ್ ಸರ್ವೀಸ್ ಸಂಸ್ಥೆಗಳೊಂದಿಗೆ ಉಂಟಾಗಿದ್ದ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿರುವ ಹಿನ್ನೆಲೆಯಲ್ಲಿ ಈ ವಾರದಿಂದ ಕನ್ನಡದ ಹೊಸ ಚಿತ್ರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿವೆ.

ಯುಎಫ್‍ಒ ಮತ್ತು ಕ್ಯೂಬ್ ಡಿಜಿಟಲ್ ಸರ್ವೀಸ್ ಪ್ರೊವೈಡರ್ ಸಂಸ್ಥೆ ನಡುವೆ ಇದ್ದಂತಹ ಗೊಂದಲ ಸದ್ಯಕ್ಕೆ ಶಮನವಾಗಿದ್ದು , ಚಿತ್ರ ಪ್ರದರ್ಶನವನ್ನು ಅರಂಭಿಸಲಾಗುತ್ತಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ತಿಳಿಸಿದ್ದಾರೆ.

ವಾಣಿಜ್ಯ ಮಂಡಳಿಯಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಯುಎಫ್‍ಒ ಮತ್ತು ಕ್ಯೂಬ್ ಡಿಜಿಟಲ್ ಸರ್ವೀಸ್ ಪ್ರೊವೈಡರ್ ಸಂಸ್ಥೆ ಅಧಿಕಾರಿಗಳ ಜೊತೆ ನಿನ್ನೆ ಮಾತುಕತೆ ನಡೆದಿದ್ದು , ಈ ತಿಂಗಳ ಅಂತ್ಯದವರೆಗೆ ಗಡುವು ಕೇಳಿದ್ದಾರೆ ಎಂದಿದ್ದಾರೆ.

ಸಂಸ್ಥೆ ಅಧಿಕಾರಿಗಳು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ವಾರ ಬಿಡುಗಡೆಯಾಗಬೇಕಾದಂತಹ ಚಲನಚಿತ್ರಗಳು ಬಿಡುಗಡೆಗೊಳ್ಳಲಿದೆ. ಸಂಸ್ಥೆಯು ಒಂದು ಚಿತ್ರ ಬಿಡುಗಡೆ ತೆಗೆದುಕೊಳ್ಳಬೇಕಾದ ಹಣವನ್ನು ಪಡೆಯುತ್ತದೆ. ಮಾತುಕತೆ ವಿಫಲವಾದರೆ ಚಿತ್ರ ನಿರ್ಮಾಪಕರಿಗೆ ಚಿತ್ರದ ಶೇ.50ರಷ್ಟು ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿದ್ದಾರಂತೆ.

ಈ ತಿಂಗಳ ಅಂತ್ಯದವರೆಗೆ ಅವಕಾಶ ನೀಡಿದ್ದು , ಮುಂದಿನ ದಿನಗಳಲ್ಲಿ ಖಾಸಗಿ ಸಂಸ್ಥೆಗಳು ವಿಧಿಸಿರುವ ದುಬಾರಿ ಶುಲ್ಕದಿಂದ ವಿನಾಯ್ತಿ ಸಿಗದಿದ್ದರೆ ಚಿತ್ರ ಪ್ರದರ್ಶವನ್ನು ಸಂಪೂರ್ಣ ಬಂದ್ ಮಾಡಲಾಗುವುದು.

ಇದಕ್ಕೆ ತಮಿಳು ಚಲನಚಿತ್ರ ವಾಣಿಜ್ಯ ಮಂಡಳಿಯು ಬೆಂಬಲ ನೀಡಿದೆ ಎಂದು ಸಾ.ರಾ.ಗೋವಿಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ