ಮಾನವನು ಸ್ವಾಸ್ತ್ಯವಾಗಿರಲು ಮಾಡಬೆಕಾಗಿರುವುದೇನು?

ಹೇಗೆ ನಾವು ಸ್ವಾಸ್ತ್ಯವಾಗಿರಲು ಆಹಾರ(ನಾವು ಸೇವಿಸುವ ಆಹಾರ) ಮತು ವಿಹಾರ(ನಾಮ್ಮ ಲೈಫ್ಫಸ್ಟೈಲ್)ಮುಖ್ಯವೋ ಹಾಗೇಯೇ ನಾವು ಸ್ವಸ್ತ್ಯವನ್ನು ಕಾಪಾಡಲು ದಿನಚರ್ಯ, ರಾತ್ರಿಚರ್ಯ ಮತು ಋತುಚರ್ಯ ಬಹುಮುಖ್ಯವಾಗಿರುತ್ತದೆ.ಆಯುರ್ವೇದದಲ್ಲಿ ನಮ್ಮ ಆಚಾರ್ಯರು ಬಹು ಹೆಚ್ಚಾಗಿ ದಿನಚರ್ಯ,ರಾತ್ರಿಚರ್ಯದ ಬಗ್ಗೆ ವಿವರಿಸಿದಾರೆ.ಮಾನವನು ಆರೋಗ್ಯವಾಗಿರಲು ಇವು ಬಹುಮುಖ್ಯ ಪಾತ್ರವಹಿಸುತದೆ.

 

ಸ್ವಾಸ್ತ್ಯ ಎಂದರೇನು?

ಯಾರ ಶರೀರದಲ್ಲಿ ದೋಷಗಳು(ವಾತ,ಪಿತ್ತ.ಕಫ)ಸಮವಾಗಿದ್ದು,ಅಗ್ನಿ(ಜಾಠರಾಗ್ನಿ ಹಾಗು ದಾತಾವಗ್ನಿ),ಧಾತುಗಳು (ಸಪ್ತದಾತುಗಳಾದ-ರಸ, ರಕ್ತ, ಮಾಂಸ, ಮೆದ, ಅಸ್ತಿ, ಮಜ್ಜ, ಶಕ್ರ)ಹಾಗು ಮಲ(ಮಲ,ಮೂತ್ರ) ಸಮವಾಗಿರುತ್ತದೋ ಅವನನ್ನು ಸ್ವಾಸ್ತ್ಯ ಎಂದು ಕರೆಯುತ್ತಾರೆ.ಹಾಗು ಯಾರಲ್ಲಿ ಪ್ರಸನ್ನವಾಗಿರುವ ಆತ್ಮ,ಶರೀರ,ಮನಸ್ಸು ಹಾಗು ಇಂದ್ರಿಯಗಳಿರುತ್ತದೋ ಅವನನ್ನು  ಸುಶ್ರುತಾಚಾರ್ಯರು ಸ್ವಸ್ತ್ಯ ಎಂದು ಕರೆದಿದ್ದಾರೆ.

ಆಯುರ್ವೇದದಲ್ಲಿ ಸ್ವಾಸ್ತ್ಯ ಎಂದು ಒಬ್ಬ ಮನುಷ್ಯನನು ಕರೆಯಲು ಕೆವಲ ಅವನು ಶರೀರಿಕವಾಗಿ ಅಲ್ಲದೆ ಮಾನಸಿಕವಾಗಿಯು ಸಹ ಆತ ಸ್ವಾಸ್ತ್ಯನಾಗಿರಬೇಕು.ಬಹುಷಃ ಪ್ರಪಂಚದ ಯಾವುದೇ ಜೀವಶಾಸ್ತ್ರದಲ್ಲಿ ಈ ಶರೀರ,ಮಾನಸ್ಸು ಹಾಗು ಆತ್ಮದ ಸ್ವಾಸ್ತ್ಯದ ಬಗ್ಗೆ ಇಷ್ಟು ವಿವರವಾಗಿ ಹೇಳಲಿಕ್ಕಿಲ್ಲ.

 

ಹಾಗಾದರೆ ನಾವು ಸ್ವಾಸ್ತ್ಯವಾಗಿರಲು ಮಾಡಬೇಕಾಗಿರುವುದೇನು?

ನಿಯಮಿತವಾದ ದಿನಚರ್ಯ,ರಾತ್ರಿಚರ್ಯ ಹಾಗು ಋತುಚರ್ಯವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು.

 

ದಿನಚರ್ಯ ಏಂದರೇನು?

ಬೆಳಗೆ ಸೂರ್ಯ ಉದಯಿಸುವ ಮೋದಲಿನಿಂದ ಸೊರ್ಯಾಸ್ಥವಾಗುವರೇಗು ನಾವುಮಾಡಬೇಕಾಗಿರುವ ಕಾರ್ಯಗಳನ್ನು ದಿನಚರ್ಯ ಎಂದು ಹೇಳುತ್ತೆವೆ.

 

ಬೆಳಗೆ ನಿದ್ದೆಯಿಂದ ಏಳಬೇಕಾದ ಸಮಯ:-

ಬೆಳಗೆ ಸೂರ್ಯ ಉದಯಿಸುವ 48 ನಿಮಿಷ ಮೂದಲಿನಿಂದ ಸೂರ್ಯೋದಯವಾಗುವ ಗಳಿಗೆಗೆ ಬ್ರಾರ್ಹಿಮುಹೊರ್ತ ಎಂದು ಕರೆಯುತ್ತಾರೆ. ಈ ಸಮಯ ಶುರುವಾಗುವ ಮೋದಲೇ ನಾವು ಎದ್ದಿರಬೇಕು.ಎದ್ದು ಮೂದಲು ಭಗವಂತನನ್ನು ಸ್ಮರಿಸಬೇಕು ನಂತರ ಮೂಸರು,ತುಪ್ಪ,ಹೂವು ಅಥವ ಬಿಲ್ವ ಮರವನ್ನು ನೋಡಬೇಕು.

ಇದಾದನಂತರ ಮೂದಲು ಅದೋ ವಾಯು,ಮಲ,ಮೂತ್ರವನ್ನು ವಿಸರ್ಜಿಸಬೇಕು.ಈ 3 ವೇಗವನ್ನು ತಡೆಯುವುದರಿಂದ ನಮ್ಮ ಶರೀರಕ್ಕೆ ಬಹಳ ಹಾನಿಯುಂಟಾಗಬಹುದು

1. ಅಧೋ ವಾಯು-ಅಧೋ ವಾಯು ತಡೆಯುವುದರಿಂದ ಸಂಘ,ಆದ್ಮಾನ ಅಂದರೆ ಹೊಟ್ಟೇ ಉಬ್ಬರಿಸುವುದು, ಹೋಟ್ಟೇನೋವು ಇತ್ಯದಿಗಳಾಗಬಹುದು.

2.ಮಲ– ಮಲವನ್ನು ತ್ಯಜಿಸದೇ ನಿಯಂತ್ರಿಸುವುದರಿಂದ ಹೂಟ್ಟೆ ನೋವು,ಪಕ್ಕೆಗಳಲ್ಲಿ ನೋವು,ಉದ್ಗಾರ ಹೆಚ್ಚಳ,ತಲೇನೋವು,ಮೋಣಕಾಲು ನೋವು,ಮಂಡಿನೋವು,ತಲೆ ಹೋಟ್ಟು ಇತ್ಯಾದಿ ಸಮಸ್ಯಗಳಾಗಬಹುದು.

3.ಮೂತ್ರ-ಮೂತ್ರವನ್ನುನಿಯಂತ್ರಿಸಿ ,ತ್ಯಜಿಸದೇ ಇದ್ದಲ್ಲಿ ಮೂತ್ರಾಶ್ಮರಿ(ರೀನಲ್ ಕ್ಯಲ್‍ಕ್ಯುಲೈ)ಮೂತ್ರಕೃಚ್ರ(ಮೂತ್ರ ಮಾಡುವಾಗ ಉರಿ)ಇತ್ಯಾದಿ ಪಿಂಡಾಶಯಕ್ಕೆಸಂಭದಿಸಿದ ರೋಗಗಳುಂಟಾಗಬಹುದು.

 

ಧಂತ ಧಾವನ-

ಧಂತ ಧಾವನವನ್ನು ಸುಮಾರು 8 ಅಂಗುಲಿ ಉದ್ದವಾಗಿರುವ ಕಾಷ್ಠದಿಂದ ಮಾಡಬೇಕು.ಧಂತ ಧಾವನವನ್ನು ನಮ್ಮ ಕಿರುಬೇರಳಿನಿಂದ್ದ ಸಹ ಮಾಡಬಹುದು.ಧಂತ ಧಾವನವನು ್ನಮದೂಕ,ನಿಂಬೆಯಿಂದ ಮಾಡÀಬಹುದು.ಅರ್ಕ(ಎಕ್ಕದ ಕಾಷ್ಠದಿಂದ ಮಾಡುವುದರಿಂದ ವೀರ್ಯ ವೃದ್ದಿಸುವುದು)ಕರಂಜದಿಂದ ಮಾಡುವುದರಿಂದ ವಿಜಯವಾಗುವುದು,ಕಾಚು ಮರದಿಂದ ಮಾಡುವುದರಿಂದ್ದ ಮುಖದ ಸೌಗಂದ್ಯ ಹೆಚ್ಚುವುದು.ಉದುಂಬರದ ಕಾಷ್ಠದಿಂದ ಮಾಡುವುದರಿಂದ್ದ ವಾಕ್ ಸಿದ್ದಿ,ಶಿರಿಶ ಮರದ ಕಾಷ್ಠದಿಂದ ಧಂತ ಧಾವನ ಮಾಡುವುದರಿಂದ್ದ ಆಯಸ್ಸು,ಆರೋಗ್ಯ ದೊರೆಯುತ್ತದೆ ಎಂದು ಆಚಾರ್ಯ ಸುಶೃತರು ವಿವರಿಸಿದ್ದಾರೆ.

 

ಜಿಹ್ವಾ ನಿರ್ಲೇಖನ-

ಜಿಹ್ವಾ ನಿರ್ಲೇಖನಕ್ಕೆ ಮೃದುವಾಗಿರುವ ಕಾಷ್ಠವನ್ನು ಉಪಯೋಗಿಸಬೇಕು.ಎದರಿಂದ ನಾಲಿಗೆಯನ್ನು ನಿದಾನವಾಗಿ ಕೆರಿಯಬೇಕು.

 

ಗಂಡೂಷ-

ಬಾಯಿ ಮುಕ್ಕಳಿಸುವುದು-ಧಂತ ಧಾವನ ಹಾಗು ಜಿಹ್ವಾ ನಿರ್ಲೇಖನದ ನಂತರ ಬಾಯನ್ನು ತಣ್ಣಗಿರುವ ನೀರಿನಲ್ಲಿ ಮುಕ್ಕಳಿಸಬೇಕು.ಇದರಿಂದ್ದ ಬಾಯಿಯ ದುರ್ವಾಸನೆ,ಕೋಳೆಹೋಗುತ್ತದೆ.ಬಾಯಾರಿಕೆ ನಿವಾರಣೆಯಾಗುತ್ತದೆ.

ಬಿಸಿ ನೀರಿನಿಂದ್ದ ಬಾಯಿ ಮುಕ್ಕಳಿಸುವುದರಿಂದ ಅರುಚಿ,ಮುಖಜ ಮಲ,ಕಫಕಡಿಮೆಯಾಗುತ್ತದೆ.

 

ಮುಖ ತೊಳೆಯುವುದು-

1.ಶೀತಲ ಜಲದಿಂದ್ದ ಮುಖತೊಳೆಯುವುದರಿಂದ ಮುಖದಲ್ಲಿರುವ ಪಿಡಕಗಳು ನಿವಾರಣಿಯಾಗುತ್ತದೆ.ಮುಖದಲ್ಲಿರುವ ಭಂಗು ಕಡಿಮೆಯಾಗುತ್ತದೆ.

2.ಉಷ್ಣ ಜಲದಿಂದ್ದ ಮುಖತೊಳೆಯುವುದರಿಂದ ಮುಖದಲ್ಲಿರುವ ಸ್ನಿಗ್ಧತೆ ,ಶೂತ ಕಡಿಮೆಯಾಗುತ್ತದೆ.

 

ನಸ್ಯ-

ಪ್ರತಿದಿನವು ಮೂಗಿಗೆ ನಸ್ಯವನ್ನು ಸಾಸಿವೆ ಎಣ್ಣೆಯಿಂದ ತೆಗೆದುಕೂಳುಬೇಕು. ದೇಹದಲ್ಲಿ ಕಫ ಹೆಚ್ಚಿದಲ್ಲಿ ಬೆಳಗೆ,ಪಿತ್ತ ಹೆಚ್ಚಿದಲ್ಲಿ ಮಧ್ಯಾನ್ನ,ಹಾಗು ವಾತ ಹೆಚ್ಚಿದಲ್ಲಿ ರಾತ್ರಿ ತೆಗೆದುಕೂಳ್ಳಬೇಕು.ಒಂದು ಹೊಳ್ಳೆಗೆ ಪ್ರತಿನಿತ್ಯ 2 ಬಿಂದು ಹಾಕಿಕೂಳ್ಳುವ ಅಭ್ಯಾಸಮಾಡಿದರೆ ಬಾಯಿಯದುರ್ಗಂದ,ಪಿಡಕ, ಭಂಗು ನಿವಾರಣೆಯಾಗುತ್ತದೆ. ಹಾಗು ಮುಖದ ಕಾಂತೆ ಹೆಚ್ಚುತ್ತದೆ ಕಣ್ಣುಸಹ ಕಾಂತಿಯುತವಾಗುತ್ತದೆ.

 

ಅಂಜನ-

ನಿತ್ಯವು ಕಣ್ಣಿಗೆ ಅಂಜನವನ್ನು ಹಾಕಬೇಕು. ಇದರಿಂದ್ದ ಕಣ್ಣಿನ ಸಮಸ್ಯಗಳಾದ ಉರಿ,ನೋವು,ನೆವೆ ನಿವಾರಣೆಯಾಗುತ್ತದೆ.ಅಂಜನವನ್ನು ತೋರುಬೆರಳಿನಷ್ಟು ಉದ್ದವಿರುವ ಬೆಳ್ಳಿ,ಸುವರ್ಣ,ತಾಮ್ರದ ತಂತಿಯಿಂದ ಹಚ್ಚಕೋಳ್ಳಬೇಕು.

 

ನಖಕರ್ತನ-

ಅಂಜನದ ನಂತರ ಕೈ,ಕಾಲಿನ ಉಗುರುಗಳನ್ನು ಕತ್ತರಿಸಬೇಕು.

 

ಕೇಶಪ್ರಸಾದನ-

ಕೇಶಕ್ಕೆ ಸುಗಂದವಾದ ತೈಲವನ್ನು ಲೇಪಿಸಬೇಕು.ನಂತರ ದರ್ಪಣದರ್ಶನ ಮಾಡಬೇಕು.

 

ವ್ಯಾಯಾಮ-

ನಾವು ವ್ಯಾಯಾಮವನ್ನು ಪ್ರತಿನಿತ್ಯ ಮಾಡುವುದರಿಂದ್ದ ಶರೀರದಲ್ಲಿಲಘುತ್ವ ಕಾಣಬಹುದು,ಅನಗತ್ಯ ಕೋಬ್ಬುನಿವಾರಣೆಯಾಗುತ್ತದೆ.

 

ಅಭ್ಯಂಗ-

ವ್ಯಾಯಾಮದ ನಂತರ ನಿತ್ಯವು ಶರೀರಕ್ಕೆ ಅಭ್ಯಂಗ ಮಾಡಬೇಕು.ಇದರಿಂದ ಶರೀರದಕ್ಕೆ ಪುಷ್ಠಿ ದೂರೆಯುತ್ತದೆ.ಅದರಲೂ ್ಲತಲೆಗೆ,ಕಿವಿಗೆ ಹಾಗು ಪಾದಕ್ಕೆ ಎಣ್ಣೆಯನನ್ನು ತಪ್ಪದೆ ಹಚ್ಚಬೇಕು.

1.ಶರೀರಕ್ಕೆ ಅಭ್ಯಂಗ -ಪ್ರತಿನಿತ್ಯ ಶರೀರಕ್ಕೆ ಅಭ್ಯಂಗ ಮಾಡುವುದರಿಂದ ಶರೀರಕ್ಕೆ ಪುಷ್ಠಿ,ನಿದ್ರೇ ಹಾಗು ಮೈಕಾಂತಿ ಹೇಚ್ಚಿಸುತ್ತದೆ.

2.ಶಿರೋಭ್ಯಂಗ- ನಿತ್ಯ ಶರೋಭಂಗ ಮಾಡುವುದರಿಂದ್ದ ಸಂಪೂರ್ಣ ಇಂದ್ರಿಯಗಳಿಗೆ ಪುಷ್ಠಿ ಕೋಟ್ಟು ಕೇಶಕ್ಕೆ ಸಂಭಂದಿಸಿದ ವ್ಯಾದಿನಿವಾರಿಸಲು ಸಹಕಾರಿ.ಚಕ್ಷುರೇಂದ್ರಿಯಕ್ಕೆ ಚೈತನ್ಯತರಲು ಶಿರೋಭ್ಯಾಂಗವನ್ನು ನಿತ್ಯಮಾಡಬೇಕು.

3.ಪಾದಾಭ್ಯಂಗ-ಪಾದಾಭ್ಯಂಗ ಮಾಡುವುದರಿಂದ ಕಣ್ಣಿಗೆಕಾಂತಿ ಕೂಡುತ್ತದೆ ಹಾಗುನಿದ್ರಾಹೀನತೆ ನಿವಾರಿಸುತ್ತದೆ.

 

ಸ್ನೇಹಪಾನ-

ಸ್ನೇಹಪಾನ ಎಂದರೆ ಸ್ನಿಗ್ದಯುಕ್ತತೈಲ/ತುಪ್ಪ ಸೇವನೆ ಮಾಡುವುದೆಂದು.ನಿತ್ಯಬೆಳಗೆ ಅಭ್ಯಂಗದಿಂದ ಹೇಗೆ ಶರೀರದ ಹೋರಗೆ ಅಂದರೆ ಚರ್ಮಕ್ಕೆ ಕಾಂತಿ,ಶರೀರಕ್ಕೆ ಪುಷ್ಠಿ ಕೂಡುತ್ತದೆ ಹಾಗೆ ತುಪ ್ಪಅಥವ ತೈಲ ಸೇವನೆಯಿಂದ್ದ ಜಾಠರಾಗ್ನಿ ಹೆಚ್ಚುವುದು ಹಾಗು ಶರೀರದ ಅನಗತ್ಯ ಕೂಬ್ಬುನಿವಾರಿಸಿ,ಎದೆಉರಿ,ಮೂತ್ರುಉರಿಯನ್ನು ಹೋಗಲಾಡಿಸುತ್ತದೆ.

 

ಸ್ನಾನ-

ಸ್ನಾನ ಮಾಡುವ ವಿದಿಯು ಸಹ ನಮ್ಮ ಆರ್ಚಾರು ಹೇಳಿದ್ದಾರೆ.ತುಂಬ ಬಿಸಿ ನೀರಿನಿಂದ ತಲೆಗೆ ಸ್ನಾನ ಮಾಡುವುದು ಕಣ್ಣಿಗೆ ಹಿತವಲ್ಲ.ತುಂಬ ತಣ್ಣಿರಿನಿಂದ ಸ್ನಾನಮಾಡಿದರೆ ಶರೀರದ ಜಾಠರಾಗ್ನಿ ತುಂಬ ಹೆಚ್ಚುತ್ತದೆ,ಆದರೆ ರಕ್ತಪಿತ್ತ ಇರುವವರಿಗೆ ಎದು ಹಿತಕರ.ಉಗುರು ಬೆಚ್ಚಗಿನ ನೀರಿನಲ್ಲಿ ನಿತ್ಯಸ್ನಾನ ಮಾಡುವುದು ಉತ್ತಮ.

 

ವಸ್ತ್ರಧಾರಣ-

ವಸ್ತ್ರದ ಬಣ್ಣವು ಆಯಾ ಋತುಗಳಿಗನುಗುಣವಾಗಿರಬೇಕು.

ಶೀತಲ ಋತುಗಳಲ್ಲಿ ನಾವು ಹಳದಿ, ಕೆಂಪು ಬಣ್ಣದ ವಸ್ತ್ರವನ್ನು ಧರಿಸಬೇಕು.

ಗ್ರಿಷ್ಮಕಾಲದಲ್ಲಿ ಕಷಾಯ ಬಣ್ಣದ ವಸ್ತ್ರವು ಉತ್ತಮ ಹಾಗು ವರ್ಷಕಾಲದಲ್ಲಿ ಬಿಳಿಬಣ್ಣದ ವಸ್ತ್ರ ಹಿತಕರ.

 

ಪ್ರಲೇಪನ-

ನಿತ್ಯವು ನಮ್ಮ ಶರೀರಕ್ಕೆ ಪ್ರಲೇಪನವನ್ನು ಹಚ್ಚುವ ಅಭ್ಯಾಸವನು ನಾವು ಅಳವಡಿಸಿಕೂಳ್ಳಬೇಕು. ಕಾಲು,ಕೈ,ಮುಖಕ್ಕೆ ಶೀತಕಾಲದಲ್ಲಿ ಕೇಸರಿ,ಅಗರುವನ್ನು ಚಂದನದಲ್ಲಿ ಬೇರಸಿ ಹಚ್ಚಬೇಕು.ಉಷ್ಣಕಾಲದಲ್ಲಿ ಕರ್ಪೂರವನ್ನು ಚಂದನದಲ್ಲಿ ಬೇರಸಿ ಲೇಪಿಸಬೇಕು ಹಾಗು ವರ್ಷಕಾಲದಲ್ಲಿ ಕೇಸರಿ ಮತ್ತು ಕಸ್ತೂರಿಯನ್ನು ಚಂದನದಲ್ಲಿ ಮಿಶ್ರಿಸಿ ಪ್ರಲೇಪಿಸಬೇಕು.

ಪ್ರಲೇಪನದಿಂದ್ದ  ಶರೀರದ ದುರ್ವಾಸನೆ ನಿಯಂತ್ರಿಸಿ ಅತಿಯಾದ ದಾಹ ಹೂಗಲಾಡಿಸಿ, ಮೈಕಾಂತಿಯನ್ನು ವೃದ್ದಿಸುತ್ತದೆ.

 

ಪುಷ್ಪದಾರಣೆ-

ಸುಗಂದಿತ ಪುಷ್ಪ,ಪತ್ರೆಗಳನ್ನು ತಲೆಗೆ ಮುಡಿಯುವುದರಿಂದ್ದ ಶೋಭವುನು ಹೇಚ್ಚಿಸುವುದಲ್ಲದೆ ಕಾಂತಿಂಯುನ್ನು ಸಹ ವೃದ್ದಿಸುತ್ತದೆ.

 

ಆಭೂಷಣ-

ಆಭೂಷಣದರಿಸುವುದರಿಂದ್ದ ಆ ವ್ಯಕ್ತಿಗೆ ಪವಿತ್ರತೆ ಹಾಗು ಸೌಭಾಗ್ಯ ವದಗಿಸಿ, ಸಂತೋಶವನ್ನು ತರುತ್ತದೆ.ಆಭೋಷಣಕ್ಕೆ ಸ್ವರ್ಣ,ಅವರವರ ರಾಶಿಗನುಗುಣವಾದ ರತ್ನವನ್ನು ಧರಿಸಬೇಕು.

 

ಮುಂದೆ ಭೋಜನ ಕಾಲ,ಭೋಜನಕ್ಕೆ ಮಾಡಬೇಕಾದ ಪದ್ದತಿ,ಭೋಜನ ಹಾಗು ಜಲಪಾನ ಮಾಡಲು ಉಪಯೋಗಿಸಬೇಕಾದ ಪಾತ್ರೆ ಇತ್ಯಾದಿಗಳ ವಿವರವನ್ನು ತಿಳಿಸಲಿಚಿಸುತ್ತೇನೆ.

 

— ಡಾ. ಸಿಂಧು 

 

ಲೇಖಕರ ಬಗ್ಗೆ

ಡಾ. ಸಿಂಧು ಪ್ರಶಾಂತ್ ರವರು ಆಯುರ್ವೇದದ ಪದವಿಯನ್ನು ಹೊಂದಿದ್ದು ಎಮ್.ಡಿ (ಆಲ್‍ಟರ್ನೇಟಿವ್ ಮೆಡಿಸನ್‍) ನಂತರ ಎಮ್.ಎಸ್ಸಿ(ಯೋಗ) ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತಾ ಬೆಂಗಳೂರಿನಲ್ಲಿ 8 ವರ್ಷಗಳಿಂದ ಜನರಿಗೆ ಸೇವೆ ಸಲ್ಲಿಸುತಿದ್ದಾರೆ.

ಗರ್ಭಿಣಿಯರಿಗೆ ಯೋಗದ ಮಹತ್ವ ಹಾಗು ಗರ್ಭಿಣಿಯರು ಹೇಗೆ ಯೋಗವನ್ನು ಮಾಡಬೇಕು ಎಂದು ಹಲವಾರಿಗೆ ಹೇಳಿಕೂಡುತ್ತಿದ್ದಾರೆ. ಇದನ್ನು ಕುರಿತು ಪುಸ್ತಕವನ್ನು ಅತಿ ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಡಾ .ಸಿ೦ಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.  “ನೃತ್ಯ ಪ್ರಾರ್ಥನಾ” ಎಂಬ ಭರತನಾಟ್ಯದ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಷ್ಯವೃಂದ ತಯಾರಿಸುತಿರುವ ಹೇಗಳಿಕೆ ಇವರದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ