ನವದೆಹಲಿ,ಮಾ.10- ಸಿಂಗಾಪುರದಲ್ಲಿ ನಡೆದ ರಾಹುಲ್ ಗಾಂಧಿ ಅವರ ಸಂವಾದದ ನಾಲ್ಕೈದು ವಿವಿಧ ವೀಡಿಯೋ ದೃಶ್ಯಗಳನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಈ ಬಗ್ಗೆ ಪ್ರಸನ್ಜೀತ್ ಬಸು ಎಂಬುವವರು ಈ ವಿಡಿಯೋವನ್ನು ಕೂಡಲೇ ಡಿಲೀಟ್ ಮಾಡದಿದ್ದರೆ ಸಿಂಗಾಪುರದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಕಾಂಗ್ರೆಸ್‍ಗೆ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ರಾಜಕೀಯ ನಾಯಕನನ್ನು ವಿವಿಧ ರೀತಿಯಲ್ಲಿ ಪ್ರಸ್ತುತ ಪಡಿಸುವುದಕ್ಕಾಗಿ ನಕಲಿ ವಿಡಿಯೋವನ್ನು ಟ್ವಿಟರ್‍ಲ್ಲಿ ಪ್ರಕಟಿಸಿದ್ದು ತಪ್ಪು ಎಂದು ಅವರು ಟ್ವೀಟ್ ಮಾಡಿದ್ದಾರೆ.