ಒಂದೊಮ್ಮೆ ಸಾಯುತ್ತೇನೆ ಹೊರತು ದೇಶದ್ರೋಹದ ಕೆಲಸ ಮಾಡಲ್ಲ: ಕ್ರಿಕೆಟಿಗ ಮೊಹಮ್ಮದ್ ಶಮಿ ಸ್ಪಷ್ಟನೆ

ಕೋಲ್ಕತ್ತಾ:ಮಾ-೧೦: ಟೀಂ ಇಂಡಿಯಾ ಕ್ರಿಕೆಟ್‌ ತಂಡದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಆತನ ಪತ್ನಿ ಮ್ಯಾಚ್ ಫಿಕ್ಸಿಂಗ್ ಅರೋಪ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಮಿ, ದೇಶಕ್ಕಾಗಿ ಸಾಯುತ್ತೇನೆ ಹೊರತು ದೇಶದ್ರೋಹದ ಕೆಲಸ ಎಂದಿಗೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಶಮಿ ಪತ್ನಿ ಹಸೀನ್ ಜಹಾನ್ ಶಮಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ, ಅತ್ಯಾಚಾರ, ದೈಹಿಕ ಹಿಂಸೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೊಲೆ ಕೇಸ್‌ ದಾಖಲು ಮಾಡಿದ್ದರು. ನಡುವೆ ಫಿಕ್ಸಿಂಗ್‌‌‌ ಆರೋಪವನ್ನು ಕೂಡ ಮಾಡಿದ್ದರು.

ಈ ವಿಚಾರವಾಗಿ ಮಾತನಾಡಿರುವ ಮೊಹಮ್ಮದ್‌ ಶಮಿ ಒಂದೊಮ್ಮೆ ಬೇಕಾದರೆ ಸಾಯುತ್ತೇನೆಯೇ ಹೊರತು ದೇಶ ದ್ರೋಹ ಎಸಗುವ ಕೃತ್ಯ ಎಂದಿಗೂ ಮಾಡುವುದಿಲ್ಲ ಎಂದಿದ್ದಾರೆ.

ಅಲ್ಲದೇ ಹಸೀನ್ ಹಾಗೂ ಆಕೆಯ ಕುಟುಂಬಸ್ಥರು ಒಟ್ಟಿಗೆ ಕುಳಿತು ಮಾತನಾಡೋಣ. ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದಿದ್ದಾರೆ. ಯಾರು ಆಕೆಯ ದಾರಿ ತಪ್ಪಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

ಶಮಿ ಪಾಕಿಸ್ತಾನಿ ಯುವತಿ ಅಲಿಶ್ಬಾ ಎಂಬುವಳಿಂದ ಹಣ ಪಡೆದಿದ್ದಾರೆ. ಅವರು ಮ್ಯಾಚ್ ಫಿಕ್ಸಿಂಗ್‌’ನಲ್ಲಿ ತೊಡಗಿರಬಹುದು. ಆಕೆಯಿಂದ ಏಕೆ ಹಣ ಪಡೆದಿದ್ದೇನೆ ಎಂದು ಶಮಿ ನನಗೆ ಯಾವತ್ತೂ ಹೇಳಿಲ್ಲ. ಆತ ನನಗೆ ಮೋಸ ಮಾಡಬಹುದು ಎಂದಾದಲ್ಲಿ, ದೇಶಕ್ಕೆ ಮೋಸ ಮಾಡಿದ್ದರೂ ಯಾವುದೇ ಆಶ್ಚರ್ಯವಿಲ್ಲ ಎಂದು ಹಸೀನ್ ಜಹಾನ್ ದೂರಿದ್ದರು.

Mohammed Shami, Hasin jahan, Match-Fixing

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ