ತ್ರಿಪುರಾದಲ್ಲಿದ್ದ ರಷ್ಯಾದ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಪ್ರತಿಮೆ ಧ್ವಂಸ: ಇದು ರಾಜ್ಯದ ಜನತೆ ಬಯಸುತ್ತಿರುವ ಬದಲಾವಣೆಯ ಪ್ರತೀಕ ಎಂದ ಬಿಜೆಪಿ

ತ್ರಿಪುರಾ:ಮಾ-6: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಷ್ಯಾದ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಈ ಕ್ರಮವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ರಾಜ್ಯದ ಬೆಲೋನಿಯಾ ಎಂಬ ಪ್ರದೇಶದಲ್ಲಿ ಲೆನಿನ್ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿತ್ತು. ಈ ಪುತ್ಥಳಿಯನ್ನು ಸ್ಥಳೀಯರು ಧ್ವಂಸ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದ್ದು, ಧ್ವಂಸ ಮಾಡುತ್ತಿರುವವರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗಿದ್ದಾರೆ.

ಇನ್ನು ಈ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಪ್ರತಿಕ್ರಿಯೆ ನೀಡಿದ್ದು, ತ್ರಿಪುರಾದಲ್ಲಿದ್ದ ರಷ್ಯಾ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಪ್ರತಿಮೆ ಧ್ವಂಸ ಮಾಡಿರುವುದು ರಾಜ್ಯದ ಜನತೆ ಬಯಸುತ್ತಿರುವ ಬದಲಾವಣೆಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ.

ತ್ರಿಪುರಾದಲ್ಲಿನ ಬಿಜೆಪಿ ಗೆಲುವು “ರಾಜ್ಯದಲ್ಲಿ ಕಾರ್ಲ್ ಮಾರ್ಕ್ಸ್ ವ್ಲಾದಿಮಿರ್ ಲೆನಿನ್ ನಂತಹವರು ಆದರ್ಶಗಳಿಗೆ ಅಂಕುಶ ಹಾಕುವುದಕ್ಕೆ ಮುನ್ನುಡಿ ಎಂದು ಬಿಜೆಪಿ ಹೇಳಿತ್ತು.
Tripura,BJP,brought down,Vladimir Lenin statue

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ