ಮೆಘಾಲಯ ’ಕೈ’ತಪ್ಪುವ ಸಾಧ್ಯತೆ ಎನ್ ಪಿಪಿ-ಬಿಜೆಪಿ-ಇತರೆ ಪಕ್ಷಗಳಿಂದ ಸರ್ಕಾರ ರಚನೆಗೆ ನಿರ್ಧಾರ

ಶಿಲ್ಲಾಂಗ್:ಮಾ-5: ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವ ಮೇಘಾಲಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಿಸಿದ್ದರೂ ಕೂಡ ಎನ್‌ಪಿಪಿ ಪಕ್ಷವು ಬಿಜೆಪಿ ಹಾಗೂ ಇತರೆ ಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಲು ಮುಂದಾಗಿದೆ. ಈ ಮೂಲಕ ಕಾಂಗ್ರೆಸ್ ಕೈ ತಪ್ಪುವ ಸಾಧ್ಯತೆ ದಟ್ಟವಾಗಿದೆ.

ಎನ್‌ಪಿಪಿಯ ಕನ್ರಾಡ್‌ ಸಂಗ್ಮಾ ಅವರು ಮೇಘಾಲಯದ ಸಿಎಂ ಆಗುವ ಸಾಧ್ಯತೆ ಇದ್ದು, ಮಂಗಳವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಗ್ಮಾ ಅವರು ರಾಜ್ಯಪಾಲ ಗಂಗಾ ಪ್ರಸಾದ್ ಅವರನ್ನು ಭೇಟಿಯಾಗಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ್ದಾರೆ.

ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳನ್ನು ಜಯಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಎನ್‌ಪಿಪಿ 19, ಬಿಜೆಪಿ 2 ಮತ್ತು ಪಕ್ಷೇತರರು 11 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಸರಳ ಬಹುಮತಕ್ಕೆ 31 ಶಾಸಕರ ಬೆಂಬಲ ಅಗತ್ಯವಿದೆ.

ಅಂತೆಯೇ 19 ಸ್ಥಾನ ಗಳಿಸಿರುವ ಎನ್‌ಪಿಪಿಗೆ ಯುಡಿಪಿಯ 6, ಪಿಡಿಎಫ್‌ನ 4, ಬಿಜೆಪಿ 2 ಹಾಗೂ ಮೂವರು ಪಕ್ಷೇತರ ಶಾಸಕರು ಬೆಂಬಲ ಸೂಚಿಸಿದ್ದಾರೆ. ಈ ಮೂಲಕ ಎನ್‌ಪಿಪಿಗೆ 34 ಶಾಸಕರ ಬೆಂಬಲ ಸಿಕ್ಕಿದ್ದು, ಸರ್ಕಾರ ರಚನೆಗೆ ಮುಂದಾಗಿದೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಸಂಗ್ಮಾ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಮುಖ್ಯವಲ್ಲ. ಬಹುಮತ ಹೊಂದುವುದು ಮುಖ್ಯ ಎಂದು ತಿಳಿಸಿದ್ದಾರೆ.

Meghalaya, Election,NPP set to head the government,BJP

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ