ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಅರಳಿದ ಕಮಲ: ಮೆಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ

ಅಗರ್ತಲಾ/ಕೊಹಿಮಾ:ಮಾ-3:ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೆಘಾಲಯ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದುದ್ದು, ತ್ರಿಪುರಾ ಹಾಗೂ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಪಾರುಪತ್ಯಸ್ಥಾಪಿಸಿದೆ. ಇನ್ನು ಮೆಘಾಲಯದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದುಕೊಂಡಿದೆ.

ತ್ರಿಪುರಾದಲ್ಲಿ – ಬಿಜೆಪಿ 41, ಸಿಪಿಎಂ 18, ಇತರೆ 1 ಸ್ಥಾನಗಳನ್ನು ಪಡೆದುಕೊಂಡಿದೆ.

ನಾಗಾಲ್ಯಾಂಡ್‌ನಲ್ಲಿ – ಬಿಜೆಪಿ 31ಸ್ಥಾನ, ಎನ್‌ಪಿಎಫ್‌ 24, ಕಾಂಗ್ರೆಸ್ 1 ಹಾಗೂ ಇತರರು4 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

​ಮೇಘಾಲಯದಲ್ಲಿ -ಕಾಂಗ್ರೆಸ್ 22 ಸ್ಥಾನಗಳನ್ನು ಪಡೆದು ಮುನ್ನಡೆಯಲ್ಲಿದ್ದರೆ ಎನ್‌ಪಿಪಿ 16, ಬಿಜೆಪಿ4 ಹಾಗೂ ಇತರರು 17 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ತ್ರಿಪುರಾದಲ್ಲಿ ಫೆ.18, ನಾಗಾಲ್ಯಾಂಡ್‌ ಮತ್ತು ಮೇಘಾಲಯಗಳಲ್ಲಿ ಫೆ.27ರಂದು ಚುನಾವಣೆ ನಡೆದಿತ್ತು. ಈ ಮೂರು ರಾಜ್ಯಗಳು ತಲಾ 60 ಸದಸ್ಯ ಬಲ ಹೊಂದಿವೆಯಾದರೂ, ಚುನಾವಣೆ ನಡೆದಿರುವುದು ತಲಾ 59 ಸ್ಥಾನಗಳಿಗೆ ಮಾತ್ರ. ಮೂರು ರಾಜ್ಯಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

ಮೂರೂ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಮೆಘಾಲಯದಲ್ಲಿ ಕಾಂಗ್ರೆಸ್ ಸ್ಥಾನ ಉಳಿಸಿಕೊಂಡಿದ್ದು, ಕಮಲಕ್ಕೆ ಮುಖಭಂಗವಾಗಿದೆ.

North-East Elections results 2018, Tripura,Nagaland,Meghalaya

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ