ಕೋಟ್ಯಂತರ ರೂ. ಮೌಲ್ಯದ ನಂದಿ, ಬೀಟೆ, ಸಾಗುವಾನಿ, ಮರಗಳ ಕಳ್ಳತನ

ಚಿಕ್ಕಮಗಳೂರು,ಮಾ.2- ಭದ್ರಾ ಹುಲಿ ಸಂರಕ್ಷಿತ ಅರಣ್ಯದ ಅಬ್ಬೆ ಅರಣ್ಯ ವನ್ಯಜೀವಿ ವಲಯದಲ್ಲಿ ಕೋಟ್ಯಂತರ ರೂ. ಮೌಲ್ಯದ ನಂದಿ, ಬೀಟೆ, ಸಾಗುವಾನಿ, ಮರಗಳ ಕಳ್ಳತನ ಅವ್ಯಾಹತವಾಗಿ ನಡೆಯುತ್ತಿದೆ.
ಜಿಲ್ಲೆಯ ಬಾಳೇಹೊನ್ನೂರು ಬಳಿಯ ಅಬ್ಬೆ ವನ್ಯಜೀವಿ ವಲಯದಲ್ಲಿ ಪ್ರತಿನಿತ್ಯ ಲಕ್ಷಾಂತರ ಬೆಲೆಯ ಕಾಡುಮರಗಳು ಸೇರಿದಂತೆ ಇನ್ನಿತರ ಮರಗಳನ್ನು ಕಳ್ಳರು ಕಡಿದು ಸಾಗಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮರಗಳ ಕಡಿದು ಸಾಗಿಸುವ ಕೆಲಸ ನಡೆದಿದ್ದು, ಇದೀಗ ಅರಣ್ಯದಲ್ಲಿರುವ ಕೋಟ್ಯಂತರ ಮೌಲ್ಯದ ಮರಗಳು ಜೀವ ಕಳೆದುಕೊಂಡಿವೆ.
ಮನೆ ನಿರ್ಮಾಣ, ಪೀಠೋಪಕರಣಗಳ ತಯಾರಿಕೆ ಸೇರಿದಂತೆ ಇನ್ನಿತರೆ ಕೆಲಸಗಳಿಗಾಗಿ ಈ ಮರಗಳನ್ನು ಕಡಿಯುತ್ತಿರುವ ಶಂಕೆ ವ್ಯಕ್ತವಾಗಿದ್ದು , ಶೃಂಗೇರಿ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಕ್ರಮವಾಗಿ ಮರಗಳನ್ನು ಕಡಿಸಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ