ಪ್ರಸಿದ್ಧ ರತ್ನಗಿರಿ ಬೋರೆಯ ಮಹಾತ್ಮ ಗಾಂಧಿ ಪಾರ್ಕ್‍ನಲ್ಲಿ ಮರಕ್ಕೆ ಬೆಂಕಿ

ಚಿಕ್ಕಮಗಳೂರು, ಫೆ.28- ಇಲ್ಲಿನ ಪ್ರಸಿದ್ಧ ರತ್ನಗಿರಿ ಬೋರೆಯ ಮಹಾತ್ಮ ಗಾಂಧಿ ಪಾರ್ಕ್‍ನಲ್ಲಿ ಮರಕ್ಕೆ ಬೆಂಕಿ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಉದುರಿದ್ದ ಎಲೆಗಳು ಒಣಗಿ ಬಿದ್ದಿದ್ದು , ಆಕಸ್ಮಿಕ ಬೆಂಕಿ ಕಿಡಿಗೆ ಇಲ್ಲಿನ ಶ್ರೀಗಂಧ ಮರಗಳು ಸೇರಿದಂತೆ ಔಷಧಿ ಸಸ್ಯಗಳು, ಹೂವಿನ ಗಿಡಗಳು ಕೂಡ ಬೆಂಕಿಗೆ ಆಹುತಿಯಾಗಿದೆ.
ಸುಮಾರು 10 ಎಕರೆ ಪ್ರದೇಶದ ಈ ಪಾರ್ಕ್‍ನಲ್ಲಿ ಇದೇ ಮೊದಲ ಬಾರಿಗೆ ಇಂತಹ ದುರ್ಘಟನೆ ನಡೆದಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ