ಮಗುವಿನ ಅಳು ಕೇಳಲಾರದೆ ಹೆತ್ತ ಮಗುವನ್ನೇ ಕೊಂದ ತಾಯಿ…

ನವದೆಹಲಿ:ಫೆ-25: ಮಗುವಿನ ಅಳುವಿನಿಂದ ಬೇಸತ್ತ ತಾಯಿ ಹೆತ್ತ ಮಗುವನ್ನೇ ಕೊಂದುಹಾಕಿರುವ ಘಟನೆ ದೆಹಲಿಯ ವಿನೋದ್ ನಗರ ಪ್ರದೇಶದಲ್ಲಿ ನಡೆದಿದೆ.

25 ದಿನಗಳ ಹೆಣ್ಣು ಮಗು ನಿರಂತರವಾಗಿ ಅಳುತ್ತಲೇ ಇತ್ತು. ಇದರಿಂದ ರೋಸಿ ಹೋದ ತಾಯಿ ಮಗುವನ್ನು ಡಸ್ಟ್‌ಬಿನ್‌ಗೆ ಎಸೆದು ಕೊಂದಿದ್ದಾಳೆ. ನಿರ್ದಯಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವಿನ ಅಳುವಿನ ಶಬ್ಧ ನನ್ನನ್ನು ಹಿಂಸಿಸುತ್ತಿತ್ತು. ನನಗೆ ಸರಿಯಾಗಿ ಮಲಗಲೂ ಸಾಧ್ಯವಾಗುತ್ತಿರಲಿಲ್ಲ. ಏನೇ ಮಾಡಿದರು ಅಳು ನಿಲ್ಲಿಸದೇ ಇದ್ದುದರಿಂದ ಕೋಪದಲ್ಲಿ ಮಗುವನ್ನು ಕೊಂದೆ ಎಂದು ಪೊಲೀಸರೆದುರು ಮಹಿಳೆ ಬಾಯ್ಬಿಟ್ಟಿದ್ದಾಳೆ.

Delhi, Vinod Nagar, Mother kills, 25-day-old baby girl

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ