ಮೋಸ್ಟ್ ವಾಂಟೆಡ್ ಟೆರರಿಸ್ಟ್ ಸೋಹನ್‌ ಡಿ ಶಿರಾ ಹತ್ಯೆ

ಶಿಲಾಂಗ್‌ :ಫೆ-24: ಮೆಘಾಲಯದ ಈಸ್ಟ್‌ ಗ್ಯಾರೋ ಹಿಲ್ಸ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೋಸ್ಟ್‌ ವಾಂಟೆಡ್‌ ಟೆರರಿಸ್ಟ್‌ ಸೋಹನ್ ನನ್ನು ಹತ್ಯೆಗೈಯ್ಯಲಾಗಿದೆ.

ನಿಷೇಧಿತ ಗ್ಯಾರೋ ನ್ಯಾಶನಲ್‌ ಲಿಬರೇಶನ್‌ ಆರ್ಮಿಯ (ಜಿಎನ್‌ಎಲ್‌ಎ) ಸ್ವ ಘೋಷಿತ ಮುಖ್ಯಸ್ಥ ನಾಗಿದ್ದ ಉಗ್ರ ಸೋಹನ್‌ ಡಿ ಶಿರಾ ನನ್ನು ಡೋಬು ಸಮೀಪದ ಅಛಾಪೆಕ್‌ ಗ್ರಾಮದಲ್ಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಆತನ ತಲೆಗೆ 10 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು.

ಫೆ.18ರಂದು ನ್ಯಾಶನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಭ್ಯರ್ಥಿ ಜೋನಾಥನ್‌ ಎನ್‌ ಸಂಗ್ಮಾ ಅವರನ್ನು ಐಇಡಿ ದಾಳಿಯಲ್ಲಿ ಸಾಯಿಸಲಾಗಿತ್ತು. ಈ ಪ್ರಕರಣದ ಹಿನ್ನಲೆಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿತ್ತು. ಸಂಗ್ಮಾ ಅವರನ್ನು ಬಲಿ ಪಡೆಯಲು ಜಿಎನ್‌ಎಲ್‌ಎ ಬಾಂಬ್‌ ಬ್ಲಾಸ್ಟ್‌ ನಡೆಸಿತ್ತು.

meghalaya, most wanted terrorist, sohan d shira, shot-dead,police-encounter

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ