ಡಿಆರ್ ಡಿಒ ಘಟಕದಲ್ಲಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಡ್ರೋಣ್ ಪತನ

ಚಿತ್ರದುರ್ಗ:ಫೆ-22: ಕೇಂದ್ರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಘಟಕದ ಲಘು ವಿಮಾನ-ಡ್ರೋಣ್ ಪರೀಕ್ಷಾ ನೆಲೆ ಸುತ್ತ ಪರೀಕ್ಷಾ ಹಾರಾಟ ನಡೆಸುತ್ತಿದ್ದ ವೇಳೆ ಕೆಳಗುರುಳಿಬಿದ್ದು ಪತನಗೊಂಡಿರುವ ಘಟನೆ ಚಿತ್ರದುರ್ಗದ ಕುದಾಪುರದಲ್ಲಿ ನಡೆದಿದೆ.

ಚಳ್ಳಕೆರೆ ತಾಲ್ಲೂಕಿನ ಕುದಾಪುರದಲ್ಲಿರುವ ಡಿಆರ್‌ಡಿಒ) ಘಟಕದ ಹೊರಭಾಗದಿಂದ 3 ಕಿ.ಮೀ. ದೂರದಲ್ಲಿ ಪರಿವೀಕ್ಷಣಾ ಹಾರಾಟ ನಡೆಸುತ್ತಿದ್ದ ಡ್ರೋನ್‌, ದೊರೆಗಳಹಟ್ಟಿ ಗ್ರಾಮದ ಬಂಗಾರಪ್ಪ ಅವರಿಗೆ ಸೇರಿದ ರಾಗಿಹೊಲದಲ್ಲಿ ನೆಲಕ್ಕೆ ಉರುಳಿ ಬಿದ್ದಿದೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಡಿಆರ್‌ಡಿಒ ವಿಜ್ಞಾನಿಗಳ ತಂಡ ಪರೀಶೀಲನೆ ನಡೆಸಿತು. ಈ ವೇಳೆ ಮಾತನಾಡಿದ ವಿಜ್ಞಾನಿಯೊಬ್ಬರು, ‘ಇದೊಂದು ಸಣ್ಣ ಗಾತ್ರದ ಸಾಧನ. ಡಿಆರ್‌ಡಿಒ ಆವರಣದಲ್ಲಿ ಪ್ರಯೋಗಗಳನ್ನು ಮಾಡುವಾಗ ಈ ಪುಟ್ಟ ಡ್ರೋನ್, ಕೇಂದ್ರದ ತಂತ್ರಜ್ಞರ ನಿಯಂತ್ರಣವನ್ನು ಮೀರಿದೆ. ತಾಂತ್ರಿಕ ದೋಷದಿಂದಾಗಿ ಈ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.

‘ಡ್ರೋನ್’ ವಿಮಾನವನ್ನು ತಂಡ ಡಿಆರ್‌ಡಿಒ ಕಚೇರಿಗೆ ತೆಗೆದುಕೊಂಡು ಹೋಗಿದದೆ. ಇನ್ನು ಸುಮಾರು 7 ಅಡಿ ಉದ್ದ ಮತ್ತು 8 ಕೆ.ಜಿ. ತೂಕದ ಈ ವಿಮಾನ ಇದಾಗಿತ್ತು ಎನ್ನಲಾಗಿದೆ.
DRDO Drone, Crash,Challakere,Chitradurga

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ