ರೋಟೋಮ್ಯಾಕ್ ಪೆನ್ ಕಂಪೆನಿಯ ವಂಚನೆ ತನಿಖೆ ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ

ನವದೆಹಲಿ, ಫೆ.20- ಆರ್ಥಿಕ ವಲಯದಲ್ಲಿ ವಿವಾದ ಸೃಷ್ಟಿಸಿರುವ 3500 ಕೋಟಿ ರೂ.ಗಳಿಗೂ ಮೇಲ್ಪಟ್ಟ ರೋಟೋಮ್ಯಾಕ್ ಪೆನ್ ಕಂಪೆನಿಯ ವಂಚನೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರವರ್ತಕರಿಗೆ ಸೇರಿದ 11 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ.

ಉತ್ತರ ಪ್ರದೇಶದ ವಿವಿಧೆಡೆ ನಿನ್ನೆ ರಾತ್ರಿ ಕಾರ್ಯಾಚರಣೆ ಕೈಗೊಂಡ ಐಟಿ ಅಧಿಕಾರಿಗಳು ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿ ರೋಟೋಮ್ಯಾಕ್ ಕಂಪೆನಿಯ ಮುಖ್ಯಸ್ಥ ವಿಕ್ರಂ ಕೊಠಾರಿ, ಅವರ ಪತ್ನಿ ಸಾಧನಾ ಕೊಠಾರಿ ಮತ್ತು ಪುತ್ರ ರೋಹಿತ್ ಕೊಠಾರಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ