ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌ ನೂತನ ರೈಲು ಸಂಚಾರಕ್ಕೆ ಪ್ರಧಾನಿ ಚಾಲನೆ

ಮೈಸೂರು:ಫೆ-19: ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಮೈಸೂರು–ರಾಜಸ್ತಾನದ ಉದಯಪುರ ನಡುವಣ ‘ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌’ ನೂತನ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.

ಶ್ರವಣಬೆಳಗೊಳದಿಂದ ಮೈಸೂರಿಗೆ ಆಗಮಿಸಿದ ಪ್ರಧಾನಿ, ಮೈಸೂರಿನ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ಮೈಸೂರು–ಬೆಂಗಳೂರು ವಿದ್ಯುತ್‌ ರೈಲು ಮಾರ್ಗ ಹಾಗೂ ಮೈಸೂರು–ರಾಜಸ್ತಾನದ ಉದಯಪುರ ನಡುವಣ ‘ಪ್ಯಾಲೆಸ್‌ ಕ್ವೀನ್‌ ಹಮ್‌ಸಫರ್‌’ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಾಜುಭಾಯಿ ವಾಲಾ, ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Mysuru, PM Narendra Modi flags off ,Palace Queen Humsafar Express train, Mysuru & Udaipur

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ