ಕೆ ಎಸ್ ಪುಟ್ಟಣ್ಣಯ್ಯ ಅಂತಿಮ ದರ್ಶನ ಪಡೆದ ನಟ ದರ್ಶನ್

ಮಂಡ್ಯ:ಫೆ-19: ರೈತ ಮುಖಂಡ ಕೆ ಎಸ್‌ ಪುಟ್ಟಣ್ಣಯ್ಯ ಅವರ ನಿಧನ ಹಿನ್ನೆಲೆಯಲ್ಲಿ ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಗಣ್ಯರು ಪುಟ್ಟಣ್ಣಯ್ಯ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಪುಟ್ಟಣ್ಣಯ್ಯ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ನಟ ದರ್ಶನ್, ಪುಟ್ಟಣ್ಣಯ್ಯ ಅವರ ಪತ್ನಿ ಮತ್ತು ಪುತ್ರರಿಗೆ ಸಾಂತ್ವನ ಹೇಳಿದರು.

ವಿದೇಶದಲ್ಲಿರುವ ಮಗಳು-ಅಳಿಯ ಬರುವವರೆಗೆ ಅಂತ್ಯಕ್ರಿಯೆ ನಡೆಸಲಾಗುವುದಿಲ್ಲ. ಬುಧವಾರ ಮಧ್ಯಾಹ್ನದ ವೇಳೆಗೆ ಹಿಂದು ಸಂಪ್ರದಾಯದಂತೆ ವಿಧಿವಿಧಾನ ನಡೆಸಲಾಗುವುದು. ಈ ಹಿಂದೆಯೂ ನಮ್ಮ ತಂದೆಗೆ ಹೃದಯಾಘಾತವಾಗಿತ್ತು. ಬೆಂಗಳೂರಿನಗೆ ಕರೆತಂದು ಆರೋಗ್ಯ ತಪಾಸಣೆ ಮಾಡಿಸಿದ್ದೆ ಆದರೆ ಆರೋಗ್ಯದಲ್ಲಿ ಯಾವುದೇ ಏರುಪೇರು ಇರಲಿಲ್ಲ. ನಾನು ಅವರ ಮಗ ಎನ್ನುವುದಕ್ಕಿಂತ ಅವರ ಅಭಿಮಾನಿ ಎಂದು ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್‌ ತಿಳಿಸಿದ್ದಾರೆ.

ಬುಧವಾರ ಅಂತ್ಯಕ್ರಿಯೆ:
ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನೀಡಿರುವ ಮಾಹಿತಿ ಪ್ರಕಾರ ಪುಟ್ಟಣ್ಣಯ್ಯ ಅವರ ಹೆಣ್ಣುಮಕ್ಕಳು, ಅಳಿಯಂದಿರು ವಿದೇಶದಲ್ಲಿದ್ದಾರೆ. ಮಂಗಳವಾರ ಸಂಜೆ ವೇಳೆಗೆ ಅವರು ಬರಲಿದ್ದು, ಬುಧವಾರ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 10 ಗಂಟೆವರೆಗೆ ಕ್ಯಾತನಹಳ್ಳಿಯ ಸರ್ಕಾರಿ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ನಂತರ ಪಾರ್ಥೀವ ಶರೀರವನ್ನು ಮೈಸೂರಿನ ಕೆ ಆರ್‌ ಆಸ್ಪತ್ರೆಯಲ್ಲಿ ಸಂರಕ್ಷಿಸಿಡಲಾಗುವುದು. ಬುಧವಾರ ಬೆಳಗ್ಗೆ 6ರಿಂದ 9ಗಂಟೆವರೆಗೆ ಮತ್ತೆ ಅಂತಿಮ ದರ್ಶನಕ್ಕೆ ಇಟ್ಟು ನಂತರ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

K S Puttannaiah passes away,actor darshan,condolence

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ