ಬಿಜೆಪಿ ನೂತನ ಕಛೇರಿ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ:ಫೆ-18: ಆಲೋಚನೆ, ಅನುಷ್ಟಾನ, ಕ್ರಮ ಯಾವುದೇ ಇರಲಿ ಬಿಜೆಪಿ ರಾಷ್ಟ್ರೀಯತೆಗೆ ಬದ್ಧವಾಗಿದ್ದು, ಪಕ್ಷದ ಮುಖ್ಯ ಧ್ಯೇಯ ನಿಜವಾದ ಪ್ರಜಾಪ್ರಭುತ್ವವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯ ದೀನ್ ದಯಾಳ್ ಉಪಾಧ್ಯಾಯ್ ಮಾರ್ಗದ ಬಳಿ ನಿರ್ಮಾಣ ಮಾಡಲಾಗಿರುವ ಬಿಜೆಪಿ ನೂತನ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಬಿಜೆಪಿ ನೂತನ ಕಛೇರಿ ಪಕ್ಷದ ಕಾರ್ಯಕರ್ತರಿಗೆ ಆತ್ಮಬಲವನ್ನು ಹೆಚ್ಚಿಸಲಿದೆ ಎಂದರು. “ಇದು ಬಿಜೆಪಿ ಕಚೇರಿ ಅಥವಾ ನನ್ನ ಕಚೇರಿಯಲ್ಲ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಕಛೇರಿಯಾಗಿದೆ. ಇದು ಪಕ್ಷದ ಮಾರ್ಗಸೂಚಿಯಲ್ಲ, ಪ್ರತಿಯೊಬ್ಬ ಕಾರ್ಯಕರ್ತನ ಕೆಲಸ, ಕನಸು, ಭರವಸೆಗಳನ್ನು ಅರಿತುಕೊಳ್ಳುವ ಹಾಗೂ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಕಛೇರಿ ಆತ್ಮಬಲವನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರಂತಹ ದೊಡ್ಡ ವ್ಯಕ್ತಿಗಳೊಂದಿಗದೆ ಬಿಜೆಪಿ ತನ್ನ ಕಾರ್ಯಕವನ್ನು ಆರಂಭಿಸಿತ್ತು. ಕಾರ್ಯಕರ್ತರ ತಲೆಮಾರುಗಳು ಪಕ್ಷಕ್ಕಾಗಿ ತಮ್ಮ ಜೀವವನ್ನು ಸಮರ್ಪಿಸಿದ್ದಾರೆ. ದೇಶದಲ್ಲಿರುವ ಹಲವಾರು ರಾಜಕೀಯ ಪಕ್ಷಗಳ ಅಸ್ತಿತ್ವತೆ ಪ್ರಜಾಪ್ರಭುತ್ವದ ಸೌಂದರ್ಯವನ್ನು ಹೆಚ್ಚಿಸಿದೆ ಎಂದರು.

ಭಾರತದಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದು ಕಠಿಣ ಕೆಲಸವಲ್ಲ. ದೇಶದಲ್ಲಿ ಹಲವಾರು ರಾಜಕೀಯ ಪಕ್ಷಗಳಿದ್ದು, ತಮ್ಮದೇ ದೃಷ್ಟಿ, ಸಿದ್ಧಾಂತ ಹಾಗೂ ಕಾರ್ಯಚಟುವಟಿಕೆಗಳ ಸಂಸ್ಕೃತಿಯನ್ನು ಹೊಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಬಿಜೆಪಿ ನಾಯಕರು ಹಾಗೂ ಜನ ಸಂಘಗಳು ಎಲ್ಲಾ ಪ್ರಮುಖ ಜನಸಾಮಾನ್ಯ ಚಳುವಳಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ನಾಯಕತ್ವದಲ್ಲಿ ಆಡಳಿರೂಢ ಎನ್’ಡಿಎ ಸರ್ಕಾರವು ಭಾರತೀಯರಲ್ಲಿ ಭರವಸೆಗಳ ಕಿರಣವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಮೋದಿಯವರು ಇದೇ ವೇಳೆ ಹೇಳಿದ್ದಾರೆ.

ಇದೇ ವೇಳೆ ನಿಗದಿ ಪಡಿಸಲಾಗಿದ್ದ ಕಾಲಮಿತಿಯೊಳಗೆ ಬಿಜೆಪಿ ಕಚೇರಿಯನ್ನು ನಿರ್ಮಾಣ ಮಾಡಿದ್ದಕ್ಕಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಅವರ ತಂಡವನ್ನು ಈ ಮೂಲಕ ಅಭಿನಂದಿಸಲು ಇಚ್ಛಿಸುತ್ತೇನೆಂದು ಪ್ರಧಾನಿ ಶ್ಲಾಘಿಸಿದರು.

Prime Minister Narendra Modi,inaugurated,new BJP office

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ