ವಿದ್ಯಾರ್ಥಿನಿ ಪಕ್ಕ ಬಸ್ಸಿನಲ್ಲಿ ಕೂತು ಹಸ್ತಮೈಥುನ ಮಾಡಿದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಇನಾಮು: ದೆಹಲಿ ಪೊಲೀಸರಿಂದ ಘೋಷಣೆ

ನವದೆಹಲಿ:ಫೆ-17: ದೆಹಲಿ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿನಿ ಪಕ್ಕ ಬಸ್ಸಿನಲ್ಲಿ ಕೂತು ಆಕೆಯ ಮುಂದೆ ಹಸ್ತಮೈಥುನ ಮಾಡಿದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದವರಿಗೆ 25,000 ರೂ. ಇನಾಮು ಕೊಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದಾರೆ.

ಹುಡುಗಿಯ ಎದುರು ಬಸ್ಸಿನಲ್ಲಿ ಹಸ್ತ ಮೈಥುನ ಮಾಡಿಕೊಂಡ ವ್ಯಕ್ತಿಯ ವಿರುದ್ಧ ದೆಹಲಿಯ ವಸಂತ ವಿಹಾರ್‌ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ತಮ್ಮ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸುವಂತೆ ಸೂಚಿಸಲಾಗಿದೆ. ಆರೋಪಿಯ ಬಗ್ಗೆ ಮಾಹಿತಿ ನೀಡುವವರ ಗುರುತು ವಿವರಗಳನ್ನು ರಹಸ್ಯವಾಗಿಡಲಾಗುವುದು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆ.7ರಂದು ದೆಹಲಿಯ ವಸಂತ ಗ್ರಾಮ ಮತ್ತು ಐಐಟಿ ಗೇಟ್‌ ನಡುವಿನ ಬಸ್ಸಿನಲ್ಲಿ ಆರೋಪಿ ವಿಕೃತ ಕಾಮಿಯು ನಡೆಸಿದ್ದ ಕೃತ್ಯಗಳನ್ನು ಸಂತ್ರಸ್ತೆ ತನ್ನ ಮೊಬೈಲ್‌ ಕ್ಯಾಮೆರಾದಲ್ಲಿ ದಾಖಲಿಸಿಕೊಂಡಿದ್ದಳು.

ಬಸ್ಸಿನಲ್ಲಿ ತಾನು ವ್ಯಕ್ತಿಯ ವಿರುದ್ಧ ಕೂಗಾಡಿದ್ದಾಗ ಆ ವ್ಯಕ್ತಿಯು “ನಿನಗೆ ತೊಂದರೆ ಆಗುವುದಿದ್ದರೆ ನೀನು ಬಸ್ಸಿನಿಂದ ಇಳಿದು ಹೋಗು’ ಎಂದು ತನ್ನ ಕೃತ್ಯವನ್ನು ಮುಂದುವರಿಸಿದ್ದ. ತಾನು ಎಷ್ಟೇ ಎಗರಾಡಿದರೂ ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾರೂ ನೆರವಿಗೆ ಬಾರಿದೇ ತಮ್ಮ ಪಾಡಿಗೆ ತಾವಿದ್ದರು ಎಂದು ಸಂತ್ರಸ್ತ ವಿವಿ ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾಳೆ.

Delhi Police offers, bounty on man who allegedly masturbated, next to a girl in bus

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ