ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆ ಏಪ್ರೀಲ್ ನಲ್ಲಿ ಸಾಧ್ಯತೆ: ಇಸ್ರೋ

ನವದೆಹಲಿ:ಫೆ-17: ಇಸ್ರೋದ ಮಹತ್ವಕಾಂಕ್ಷೀಯ ಚಂದ್ರಯಾನ-2 ಉಪಗ್ರಹ ಉಡಾವಣೆ ಏಪ್ರಿಲ್ ನಲ್ಲಿ ನಡೆಯುವ ಸಾಧ್ಯತೆ ಇದ್ದು ಚಂದ್ರನ ದಕ್ಷಿಣ ಧ್ರುವದತ್ತ ಉಪಗ್ರಹ ಸುತ್ತು ಹಾಕಲಿದೆ ಎಂದು ಬಾಹ್ಯಾಕಾಶ ಇಲಾಖೆ ಅಧಿಕಾರಿ ಜೀತೇಂದ್ರ ಸಿಂಗ್ ತಿಳಿಸಿದ್ದಾರೆ.

ಚಂದ್ರಯಾನ 1ರ ಮೂಲಕ ಚಂದ್ರನಲ್ಲಿ ನೀರು ಇರುವುದನ್ನು ಇಸ್ರೋ ಪತ್ತೆಹಚ್ಚಿತ್ತು. ಇನ್ನು ಚಂದ್ರಯಾನ-2 ಯೋಜನೆಯೂ ಇದರ ವಿಸ್ತರಣೆಯನ್ನು ಹೊಂದಿದ್ದು ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವುದು ಒಳ್ಳೆಯದ್ದು ಎಂದು ಪರೀಕ್ಷಿಸಲಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಇಸ್ರೋ ನೂತನ ಅಧ್ಯಕ್ಷ ಕೆ ಶಿವನ್, ಭಾರತದ ಚಂದ್ರಯಾನ-2 ಯೋಜನೆಗೆ ಸುಮಾರು 800 ಕೋಟಿ ರುಪಾಯಿ ವೆಚ್ಚವಾಗಲಿದೆ. ಇನ್ನೂ ಶೋಧಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಅನ್ನು ಇಳಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ಯಾವುದೇ ಖಗೋಳದ ಮೇಲೆ ರೋವರ್ ಅನ್ನು ಇಳಿಸಲು ಚಂದ್ರಯಾನ-2 ಇಸ್ರೋದ ಮೊದಲ ಅಂತರ-ಗ್ರಹದ ಉದ್ದೇಶವಾಗಿದೆ. ಏಪ್ರಿಲ್ ನಲ್ಲಿ ಚಂದ್ರಯಾನ-2 ಉಡಾವಣೆ ಮಾಡುವ ಯೋಜನೆಯನ್ನು ಇಸ್ರೋ ಹೊಂದಿದ್ದು ಏಪ್ರಿಲ್ ನಲ್ಲಿ ಉಡಾವಣೆ ಸಾಧ್ಯವಾಗದೇ ಹೋದರೆ ನವೆಂಬರ್ ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಶಿವನ್ ತಿಳಿಸಿದ್ದಾರೆ.

Chandrayaan-2, launch in April, ISRO

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ