ಬಿದನಗೆರೆಯ ಶ್ರೀ ಸತ್ಯ ಶನೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇದೇ 13ರ ಶಿವರಾತ್ರಿಯಂದು ಅದ್ಧೂರಿ ಜಾತ್ರಾ ಮಹೋತ್ಸವ

ಬೆಂಗಳೂರು, ಫೆ.10- ಕುಣಿಗಲ್‍ನ ಬಿದನಗೆರೆಯ ಶ್ರೀ ಸತ್ಯ ಶನೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಇದೇ 13ರ ಶಿವರಾತ್ರಿಯಂದು ಅದ್ಧೂರಿ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಶಿವರಾತ್ರಿಯಂದು ಶನೇಶ್ವರನಿಗೆ ವಿಶೇಷ ಪೂಜೆ, ಮಂಗಳಾರತಿ ನಡೆಯಲಿದೆ. ದಿನಪೂರ್ತಿ ಭಜನೆ, ಹರಿಕಥೆ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಉದ್ಭವ ಬಸವಣ್ಣ ಮತ್ತು ಪಂಚಮುಖಿ ಆಂಜನೇಯ ಸ್ವಾಮಿಯ ಪುಣ್ಯಕ್ಷೇತ್ರವೆಂದೇ ಬಿಂಬಿಸಲಾಗಿರುವ ಬಿದನಗೆರೆಯಲ್ಲಿ ವಿಶ್ವದಲ್ಲೇ ಅತ್ಯಂತ ಎತ್ತರದ 151 ಅಡಿ ಆಂಜನೇಯನ ವಿಗ್ರಹವಿದ್ದು, ಪ್ರತಿನಿತ್ಯ ದೇಶ-ವಿದೇಶಗಳಿಂದ ಹಲವಾರು ಭಕ್ತರುಗಳು ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ಶ್ರಿ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಧನಂಜಯ ಸ್ವಾಮೀಜಿ ತಿಳಿಸಿದರು.

ಈ ಕ್ಷೇತ್ರದಲ್ಲಿ ಸಾಮೂಹಿಕ ಕಲ್ಯಾಣ, ಅನ್ನ ಸಂತರ್ಪಣೆಯಂತಹ  ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.

ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು ಹಾಗೂ ಸರಿಗಮಪ ಲಿಟಲ್ ಚಾಂಪ್ಸ್ ಕಲಾವಿದರು ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗಲಿದ್ದಾರೆ.

Photo Credit: wikimapia.com (ಪ್ರಾತಿನಿಧ್ಯ ಉದ್ದೇಶಕ್ಕಾಗಿ ಮಾತ್ರ ಫೋಟೋ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ