ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ ನಿಂದ ಬಹುಮಾನ

ನವದೆಹಲಿ:ಫೆ-3: ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ 4ನೇ ಬಾರಿಗೆ ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಹುಮಾನ ಘೋಷಣೆ ಮಾಡಿದೆ.

ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿರುವ ಬಿಸಿಸಿಐ, ತಂಡದ ಆಟಗಾರರಿಗೆ ಮತ್ತು ಕೋಚ್ ರಾಹುಲ್ ದ್ರಾವಿಡ್, ಸಹಾಯಕ ಕೋಚ್ ಗಳಿಗೆ ಶುಭ ಹಾರೈಸಿದೆ. ಅಲ್ಲದೆ ತಂಡಕ್ಕೆ ಬಹುಮಾನ ಘೋಷಣೆ ಮಾಡಲಾಗಿದ್ದು, ಟೂರ್ನಿಯುದ್ದಕ್ಕೂ ಮತ್ತು ಟೂರ್ನಿ ಆರಂಭಕ್ಕೂ ಮುನ್ನ ವಿಶ್ವಕಪ್ ಗಾಗಿ ತಂಡವನ್ನು ಸಜ್ಜುಗೊಳಿಸಿದ್ದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ 50 ಲಕ್ಷ ರೂ ಬಹುಮಾನ ಘೋಷಣೆ ಮಾಡಿದ್ದು, ತಂಡದ ಎಲ್ಲ ಆಟಗಾರರಿಗೂ ತಲಾ 30 ಲಕ್ಷ ರೂ ಘೋಷಣೆ ಮಾಡಿದೆ.

ಅಲ್ಲದೆ ತಂಡದ ಸಹಾಯಕ ಕೋಚ್ ಹಾಗೂ ಸಹಾಯಕ ಸಿಬ್ಹಂದಿಗಳಿಗೂ ಬಹುಮಾನ ಘೋಷಣೆ ಮಾಡಲಾಗಿದ್ದು, ಎಲ್ಲ ಸಿಬ್ಬಂದಿಗಳಿಗೂ ತಲಾ 20 ಲಕ್ಷ ರೂ ಬಹುಮಾನ ಘೋಷಣೆ ಮಾಡಿದೆ.

Photo Credit: SportsKeeda.com

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ