ಶಿವಮೊಗ್ಗ: ನಗರಕ್ಕೆ ಸಮೀಪದ ಹುಣಸೋಡು ಗ್ರಾಮದ ಕಲ್ಲುಕ್ವಾರೆಯಲ್ಲಿ ಗುರುವಾರ ರಾತ್ರಿ ಸಂಭವಿಸಿರುವ ಸೋಟದಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಬಹುಪಾಲು ಸುಟ್ಟು ಕರಕಲಾಗಿ, ಛಿದ್ರವಾಗಿದ್ದ ಮೃತದೇಹಗಳ ಪೈಕಿ ಮೂವರ ಗುರುತು ಪತ್ತೆಯಾಗಿದೆ.
ಈ ಮೊದಲು ಮೃತರೆಲ್ಲರೂ ಬಿಹಾರ ರಾಜ್ಯದ ಕಾರ್ಮಿಕರು ಎಂದು ಹೇಳಲಾಗಿತ್ತು. ಆದರೆ ಮೃತಪಟ್ಟವರೆಲ್ಲ ಕನ್ನಡಿಗರು. ಅಷ್ಟೇ ಅಲ್ಲ ಇದೇ ಜಿಲ್ಲೆಯವರೇ ಎಂದು ತಿಳಿದುಬಂದಿದೆ. ಓರ್ವ ಮಾತ್ರ ಆಂಧ್ರ ಮೂಲದವನು ಎಂದು ಗುರುತಿಸಲಾಗಿದೆ. ಮೃತರ ಪೈಕಿ ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮದ ಮಂಜುನಾಥ್ (40) ಹಾಗೂ ಪ್ರವೀಣ(45) ಎಂದು ಗುರುತಿಸಲಾಗಿದೆ. ಇನ್ನೋರ್ವ ಆಂಧ್ರಪ್ರದೇಶದ ಪವನ್ ಎಂದು ತಿಳಿದುಬಂದಿದೆ. ಇನ್ನಿಬ್ಬರ ಗುರುತು ಪತ್ತೆಕಾರ್ಯ ಮುಂದುವರಿದಿದೆ.
ಗುರುವಾರ ರಾತ್ರಿ 10.30ರ ಸುಮಾರಿಗೆ ಭಾರೀ ಸೋಟ ಈ ಪ್ರದೇಶದಲ್ಲಿ ಸಂಭವಿಸಿತ್ತು. ಕಲ್ಲು ಕ್ವಾರೆಯಲ್ಲಿನ ಬಂಡೆಗಳನ್ನು ಸೋಟ ಮಾಡಲು ಬಳಸುವ ಜಿಲೆಟಿನ್ ಕಡ್ಡಿ ಮತ್ತು ಡೈನಮೈಟ್ ಹೊತ್ತು ತಂದಿದ್ದ ಲಾರಿ ಸೋಟಗೊಂಡ ಪರಿಣಾಮ ಭಾರೀ ಪ್ರಮಾಣದ ಶಬ್ದದೊಂದಿಗೆ ಸೋಟ ಸಂಭವಿಸಿತ್ತು. ಸೋಟದಿಂದ ಸುತ್ತಮುತ್ತಲಿನ ಜನತೆ ಬೆಚ್ಚಿ ಬಿದ್ದಿದ್ದರು.
ಮೂವರ ಬಂಧನ:
ಘಟನೆ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕ್ವಾರಿ ಮಾಲೀಕ ಅವಿನಾಶ್, ಗುತ್ತಿಗೆದಾರ ಸುಧಾಕರ್ ಹಾಗೂ ಜಿಲೆಟಿನ್ ಪೂರೈಕೆ ಮಾಡುತ್ತಿದ್ದ ಗಂಧದಮನೆ ನರಸಿಂಹ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಂಬ್ ನಿಷ್ಕ್ರಿಯ ದಳದಿಂದ ಶೋಧ:
ಘಟನಾ ಸ್ಥಳದಿಂದ 300 ಮೀಟರ್ ದೂರದಲ್ಲಿ ಗುರುವಾರ ರಾತ್ರಿಯೇ ಎರಡು ಮೃತದೇಹಗಳು ಪತ್ತೆಯಾಗಿದ್ದವು. ಇನ್ನುಳಿದ ಶವಗಳ ಪತ್ತೆ ಕಾರ್ಯ ನಡೆಸುವ ಮುನ್ನ ಬೆಂಗಳೂರು ಮತ್ತು ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳಗಳನ್ನು ಕರೆಸಲಾಗಿತ್ತು. ಸಜೀವ ಜಿಲೆಟಿನ್ ಕಡ್ಡಿಗಳು ಆ ಪ್ರದೇಶದಲ್ಲಿ ಇದೆಯಾ ಎಂದು ಸುಮಾರು ಮೂರು ಗಂಟೆಗಳ ಕಾಲ ಶೋಧ ನಡೆಸಿ ಸಜೀವ ವಸ್ತುಗಳು ಇಲ್ಲದಿರುವುದನ್ನು ದೃಢಪಡಿಸಲಾಯಿತು. ಬಳಿಕ ಮೂರು ಶವಗಳು ಪತ್ತೆಯಾದವು.
ಪ್ರಮುಖರ ಭೇಟಿ:
ಜಿಲೆಟಿನ್ ಮತ್ತು ಡೈನಮೈಟ್ ತುಂಬಿದ್ದ ಲಾರಿ ಸೋಟ ಸಂಭವಿಸಿದ ಸುದ್ದಿ ಗುರುವಾರ ತಡರಾತ್ರಿ ಕಾಡ್ಗಿಚ್ಚಿನಂತೆ ಹಬ್ಬಿತು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಕಾರಿ ಕೆ.ಬಿ. ಶಿವಕುಮಾರ್. ಎಸ್ಪಿ ಕೆ.ಎಂ. ಶಾಂತಕುಮಾರ್ ದೌಡಾಯಿಸಿದ್ದರು.
ಶುಕ್ರವಾರ ಬೆಳಗ್ಗೆಯೇ ಪ್ರಮುಖರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಸ್ಥಳೀಯ ಶಾಸಕ ಅಶೋಕ ನಾಯ್ಕ ಬೆಳಗ್ಗೆಯೇ ಭೇಟಿ ನೀಡಿದ್ದರು. ಮಧ್ಯಾಹ್ನ ಗಣಿ ಖಾತೆ ನೂತನ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿದ್ದರು. ಜೊತೆಗೆ ಪೂರ್ವ ವಲಯ ಐಜಿಪಿ ರವಿ ಭೇಟಿ ನೀಡಿದ್ದರು.