ಬಸವಣ್ಣನ ಜನ್ಮಸ್ಥಳದಿಂದ ಪಾದಯಾತ್ರೆ ಆರಂಭ: ವಿವಿಧ ಮಠದ ಶ್ರೀಗಳು ಭಾಗಿ ಉತ್ತರದ ಅಭಿವೃದ್ಧಿಗೆ ಸ್ವಾಮೀಜಿಗಳ ನಡೆ

ಬಸವನಬಾಗೇವಾಡಿ: ಉತ್ತರ ಕರ್ನಾಟಕ ಪ್ರಗತಿಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆಗ್ರಹಿಸಿ ಬಸವನಬಾಗೇವಾಡಿ ಬಸವಣ್ಣನವರ ಜನ್ಮಸ್ಥಳದಿಂದ ಬೆಂಗಳೂರಿನವರೆಗೂ ಉತ್ತರ ಕರ್ನಾಟಕದ ರೈತರ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿತು.
ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ, ಮಸಬಿನಾಳದ ಸಿದ್ಧರಾಮ ಸ್ವಾಮೀಜಿ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ, ಇಟಗಿಯ ಗುರುಶಾಂತವೀರ ಸ್ವಾಮೀಜಿ, ಕೊಲ್ಹಾರದ ಕಲ್ಲಿನಾಥ ಸ್ವಾಮೀಜಿ, ಅರಕೇರಿಯ ಅಮೋಘಸಿದ್ಧೇಶ್ವರಮಠದ ಅವಧೂತ ಸ್ವಾಮೀಜಿ, ಅರಳಿಚಂಡಿಯ ಪರಮಾನಂದ ಮಹಾರಾಜರು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮುಖಾಂತರ ಚಾಲನೆ ನೀಡಿದರು.
ಶಿಕ್ಷಣ ಸೇರಿದಂತೆ ಹಲವು ಸೌಲಭ್ಯವಿಲ್ಲ:
ಉತ್ತರ ಕರ್ನಾಟಕಕ್ಕೆ ನೀರಾವರಿ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಪ್ರವಾಸೋದ್ಯಮದಲ್ಲಿ, ಆರೋಗ್ಯ ಕ್ಷೇತ್ರದಲ್ಲಿ, ಉದ್ಯೋಗದಲ್ಲಿ, ಕೈಗಾರಿಕೆ ಕ್ಷೇತ್ರದಲ್ಲಿ, ರಾಜಕೀಯ ಕ್ಷೇತ್ರದಲ್ಲಿ ಅನುದಾನ ನೀಡುವಲ್ಲಿ, ಮೂಲ ಸೌಕರ್ಯ ನೀಡುವಲ್ಲಿ ತಾರತಮ್ಯ ಎಸಗುತ್ತಿದೆ ಎಂದು ಆರೋಪಿಸಿ ಬಸವ ಜನ್ಮಸ್ಥಳದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಆರಂಭಿಸಲಾಗಿದೆ.
ಹೋರಾಟದಲ್ಲಿ ಜಾತಿ, ಧರ್ಮದ ಭೇದವಿಲ್ಲ:
ಈ ಸಂದರ್ಭದಲ್ಲಿ ಕೊಲ್ಹಾರ ದಿಂಗಬರೇಶ್ವರ ಕಲ್ಲಿನಾಥ ಸ್ವಾಮೀಜಿ ಮಾತನಾಡಿ ಹೋರಾಟಕ್ಕೆ ಯಾವುದೇ ಜಾತಿ ಧರ್ಮ ಇರುವುದಿಲ್ಲ. ಹುಟ್ಟಿದ ನಾಡಿನ ಬಗ್ಗೆ ಅಭಿವೃದ್ಧಿ ಚಿಂತೆ ಹೊಂದಿರಬೇಕು. ಆಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಸರಕಾರ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಾ ಬಂದಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕಕ್ಕೆ ಅಭಿವೃದ್ಧಿ ಮರಿಚಿಕೆಯಾಗಿದೆ ಎಂದು ಹೇಳಿದರು.
ಅಭಿನವ ಸಂಗನಬಸವ ಶಿವಾಚಾರ್ಯರು, ಸಿದ್ಧರಾಮ ಸ್ವಾಮೀಜಿ, ಅವಧೂತ ಸ್ವಾಮೀಜಿ, ಗುರುಶಾಂತವೀರ ಸ್ವಾಮೀಜಿ, ಸಿದ್ಧಲಿಂಗ ಮಹಾ ಸ್ವಾಮೀಜಿ, ಸಂಘದ ರಾಜ್ಯಾಧ್ಯಕ್ಷ ಯಾಸೀನ ಜವಳಿ, ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ ಮಾತನಾಡಿದರು.
ತೊರವಿಯ ವಿಶ್ವನಾಥ ಮಹಾರಾಜರು, ಉದಯ ಮಾಂಗಲೇಕರ, ರವಿ ರಾಠೋಡ, ಅಜೀಜ ಬಾಗವಾನ, ಅಶೋಕ ಹಾರಿವಾಳ, ಖಾಜಂಬರ ನಧಾಪ, ಶಬ್ಬೀರಾಹಮ್ಮದ ನಧಾಪ, ದಸ್ತಗೀರ ಮುಲ್ಲಾ, ಸಂಜು ಬಿರಾದಾರ, ಹನೀಫ್ ಮಕಾನದಾರ, ಅಲ್ಲಾಬಾಕ್ಸ ಬಿಜಾಪುರ, ಕಮಾಲಸಾಬ ಕೊರಬು, ರುಕ್ಮೀಣಿ ರಾಠೋಡ, ಜಗದೇವಿ ಗುಂಡಳ್ಳಿ, ಇಂದುಮತಿ ಲಮಾಣಿ, ಮಹಾದೇವಿ ಹನುಮಶೆಟ್ಟಿ ಶಾಂತಾಬಾಯಿ ಹೂವಿನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
=

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ