ದೇಶದಲ್ಲಿ ಕೋವಿಡ್ ಸೋಂಕಿನಿಂದ ಚೇತರಿಕೆಯ ಪ್ರಮಾಣ ಶೇಕಡ 96.49ಕ್ಕೆ ಏರಿಕೆಯಾಗಿದೆ. ಕಳೆದ 24 ತಾಸಿನಲ್ಲಿ 18 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 1 ಕೋಟಿ ಒಂದು ಲಕ್ಷಕ್ಕೆ ಏರಿದೆ. ಭಾರತದಲ್ಲಿನ ಚೇತರಿಕೆ ಪ್ರಮಾಣ ವಿಶ್ವದಲ್ಲೇ ಅತ್ಯಧಿಕವಾಗಿದೆ. ಒಟ್ಟು ದೃಢಪಟ್ಟ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ ಶೇಕಡ 2.07ರಷ್ಟಿದ್ದು, ಸದ್ಯ ಈ ಪ್ರಕರಣಗಳ ಸಂಖ್ಯೆ 2 ಲಕ್ಷದ 16 ಸಾವಿರದಷ್ಟಿದೆ. ಕಳೆದ 24 ತಾಸಿನಲ್ಲಿ 12 ಸಾವಿರದ 584 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ದೇಶದಲ್ಲಿ ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಒಂದು ಕೋಟಿ 4 ಲಕ್ಷ ದಾಟಿದೆ. ಭಾರತದಲ್ಲಿ ಸೋಂಕಿನಿಂದ ಸಾವಿನ ಪ್ರಮಾಣ ಶೇಕಡ 1.44ರಷ್ಟಿದ್ದು, ಇದು ಜಾಗತಿಕವಾಗಿ ಕನಿಷ್ಠ ಪ್ರಮಾಣವಾಗಿದೆ. ಕಳೆದ 24 ತಾಸಿನಲ್ಲಿ 167 ಮಂದಿ ಸೋಂಕಿನಿಂದ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ ಒಂದು ಲಕ್ಷ 51 ಸಾವಿರದ 327ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ತಾಸಿನಲ್ಲಿ 8 ಲಕ್ಷದ 97 ಸಾವಿರ ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದರೊಂದಿಗೆ ಈವರೆಗೆ ಪರೀಕ್ಷಿಸಲಾದ ಒಟ್ಟು ಕೋವಿಡ್ ಮಾದರಿಗಳ ಸಂಖ್ಯೆ 18 ಕೋಟಿ 26 ಲಕ್ಷಕ್ಕೆ ಏರಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
Related Articles
ಕೋವಿಡ್-19 ವಿರುದ್ಧ ಸಕ್ರಿಯವಾಗಿ ಹೋರಾಡಿ: ‘ಜನ ಆಂದೋಲನ’ ಅಭಿಯಾನಕ್ಕೆ ಮೋದಿ ಕರೆ
October 9, 2020
Varta Mitra News - SP
ರಾಷ್ಟ್ರೀಯ, ಪ್ರಧಾನಿ ಮೋದಿ
Comments Off on ಕೋವಿಡ್-19 ವಿರುದ್ಧ ಸಕ್ರಿಯವಾಗಿ ಹೋರಾಡಿ: ‘ಜನ ಆಂದೋಲನ’ ಅಭಿಯಾನಕ್ಕೆ ಮೋದಿ ಕರೆ
Seen By: 44 ನವದೆಹಲಿ: ಭಾರತದಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಜನಸ್ನೇಹಿಯಾಗಿದ್ದು ಕೊರೋನಾ ವಿರುದ್ಧ ಹೋರಾಡಲು ಎಲ್ಲರೂ ಜತೆಗೂಡಿ ಸಂಘಟಿತರಾಗೋಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ [more]
ದೇಶದ ಮೊದಲ ಕೋವಿಡ್ ಸೋಂಕಿತೆಗೆ ಇದೀಗ ಮತ್ತೆ ಕೊರೋನಾ ಸೋಂಕು
July 13, 2021
Varta Mitra News - SP
ರಾಷ್ಟ್ರೀಯ
Comments Off on ದೇಶದ ಮೊದಲ ಕೋವಿಡ್ ಸೋಂಕಿತೆಗೆ ಇದೀಗ ಮತ್ತೆ ಕೊರೋನಾ ಸೋಂಕು
Seen By: 51 ತ್ರಿಶೂರು: ದೇಶದ ಮೊದಲ ಕೊರೋನಾ ಸೋಂಕಿತೆ ಎಂದು ಗುರುತಿಸಿಕೊಂಡಿರುವ ವೈದ್ಯಕೀಯ ವಿದ್ಯಾರ್ಥಿನಿಯಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದಾಗಿ ಕೇರಳದ ಆರೋಗ್ಯ ಇಲಾಖೆ ಮಂಗಳವಾರ [more]
ದೀಪಾವಾಳಿ: ಪಟಾಕಿ ಮಾರಾಟಕ್ಕೆ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ
October 15, 2020
Varta Mitra News - SP
ಬೆಂಗಳೂರು, ರಾಜ್ಯ, ಧರ್ಮ - ಸಂಸ್ಕೃತಿ, ಮನರಂಜನೆ
Comments Off on ದೀಪಾವಾಳಿ: ಪಟಾಕಿ ಮಾರಾಟಕ್ಕೆ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಬಿಡುಗಡೆ
Seen By: 58 ಬೆಂಗಳೂರು: ಕೋವಿಡ್ ಹರಡುವಿಕೆ ತಡೆಯುವ ಕ್ರಮವಾಗಿ ಉತ್ಸವಗಳು, ಹಬ್ಬಗಳ ಆಚರಣೆ ಮೇಲೆ ನಿಯಂತ್ರಣ ಹೇರಿರುವ ರಾಜ್ಯ ಸರ್ಕಾರ, ಈಗ ಮುಂಬರುವ ಬೆಳಕಿನ ಹಬ್ಬ [more]