![MODI CLEAN INDIA](http://kannada.vartamitra.com/wp-content/uploads/2021/01/MODI-CLEAN-INDIA-677x451.jpg)
ಬೆಂಗಳೂರು: ಸ್ವಚ್ಛ ಭಾರತ ಮಿಷನ್ನಲ್ಲಿ ಕೆಲಸ ತುಂಬ ನಿಧಾನ ಗತಿಯಲ್ಲಿದೆ.
ಸಾಕಷ್ಟು ಅನುದಾನ ಇದ್ದರೂ ಈ ವಿಳಂಬ ಏಕೆ ? ತೀವ್ರಗತಿಯಲ್ಲಿ ಕೆಲಸ ಆಗಬೇಕು ಎಂದು ಅಕಾರಿಗಳಿಗೆ ಸಚಿವ ಡಾ.ನಾರಾಯಣಗೌಡ ಅಕಾರಿಗಳಿಗೆ ತರಾಟೆ ತೆಗೆದುಕೊಂಡರು.
ವಿಕಾಸಸೌಧದಲ್ಲಿ ಪೌರಾಡಳಿತ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪೌರಾಡಳಿತ ಸಚಿವ ನಾರಾಯಣಗೌಡ ಅವರು ಅಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಸ್ವಚ್ಛ ಭಾರತ ಮಿಷನ್ನಲ್ಲಿ ಈವರೆಗೆ ಶೇ.10ರಷ್ಟು ಕೂಡ ಕೆಲಸ ಆಗಿಲ್ಲ. ಅಕಾರಿಗಳು ಏನು ಮಾಡುತ್ತಿರೆಂದು ತಿಳಿಯುತ್ತಿಲ್ಲ. 15 ದಿನದಲ್ಲಿ ಪ್ರಗತಿ ತೋರಿಸದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ಲಾಸ್ಟಿಕ್ ನಿಷೇಧವಾಗಿ 5 ವರ್ಷ ಕಳೆದಿದೆ. ಇದುವರೆಗೂ ಸರಿಯಾಗಿ ಕಾರ್ಯರೂಪಕ್ಕೆ ಬಂದಿಲ್ಲದರಲ್ಲಿ ಕಸ ಎಸೆಯಲಾಗುತ್ತಿದೆ. ಡ್ರೈನೇಜ್ಗಳಲ್ಲಿ ಪ್ಲಾಸ್ಟಿಕ್ ಕಸವೇ ತುಂಬಿಕೊಂಡಿದೆ. ಇದಕ್ಕೆಲ್ಲ ಯಾರು ಜವಾಬ್ದಾರರು. ನಿಷೇಧವಿದ್ದರೂ ಇಷ್ಟೊಂದು ಪ್ಲಾಸ್ಟಿಕ್ ಬಳಕೆಯಾಗಲು ಕಾರಣವೇನು. ಪ್ಲಾಸ್ಟಿಕ್ ನೀರಿನ ಬಾಟಲ್ ಸೇರಿದಂತೆ ನಿತ್ಯ ಬಳಕೆಯಾಗುವ ಪ್ಲಾಸ್ಟಿಕ್ ನಿಷೇಧ ಆಗಬೇಕು. ಮಣ್ಣಿನಲ್ಲಿ ಕರಗುವಂತಹ ಪ್ಲಾಸ್ಟಿಕ್ ಮಾರುಕಟ್ಟೆಗೆ ಬರಲಿ. ಪ್ಲಾಸ್ಟಿಕ್ ವಸ್ತು ಉತ್ಪಾದಿಸುವ ಘಟಕಗಳಿಗೆ ಅಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸಚಿವರು ಸೂಚಿಸಿದರು.
ಕಸವನ್ನು ಎದರಲ್ಲಿ ಹಾಕುತ್ತಿದ್ದರು ಸಂಬಂಸಿದ ಅಕಾರಿಗಳು ತಪ್ಪಿತಸ್ಥರ ವಿರುದ್ಧ ದಂಡ ಪ್ರಯೋಗ ಕೈಗೊಳ್ಳಬೇಕು. ಈ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ಕೆಲವೆಡೆ ಕಸ ಡಂಪ್ ಮಾಡಲಾಗುತ್ತಿದೆ. ಸಂಸ್ಕರಣೆ ಆಗುತ್ತಿಲ್ಲ. ಕಸ ಹಾಕಲು ಜಾಗದ ಸಮಸ್ಯೆ ಇದೆ. ಅದನ್ನೂ ಪರಿಹರಿಸಿಲ್ಲ. ಕೇವಲ ಮೀಟಿಂಗ್ನಲ್ಲಿ ಸೂಚನೆ ಕೊಡುವುದು ಮಾತ್ರ ಆಗಿದೆ. ಅಕಾರಿಗಳು ಕಾರ್ಯಪ್ರವೃತ್ತರಾಗುತ್ತಿಲ್ಲ ಎಂದು ಸಚಿವರು ಆಕ್ಷೇಪ ವ್ಯಕ್ತಪಡಿಸಿದರು.