ಅಯೋಧ್ಯೆ:ಸುಭದ್ರ ಮಂದಿರ ನಿರ್ಮಾಣ ಯೋಜನೆ ಮುಂದುವರಿದಿದೆ ತಜ್ಞರ ಸತತ ಅಧ್ಯಯನ

ಉಡುಪಿ: ಮಕರ ಸಂಕ್ರಾಂತಿಯಿಂದ ದೇಶದಾದ್ಯಂತ ಅಯೋಧ್ಯಾ ರಾಮ ಮಂದಿರ ನಿ ಸಮರ್ಪಣಾ ಅಭಿಯಾನ ಆರಂಭವಾಗಲಿದೆ. ಹಿಂದು ಸಮಾಜದ ಐಕ್ಯತೆಯ ದ್ಯೋತಕವಾಗಿರುವ ಈ ರಾಷ್ಟ್ರ ಮಂದಿರ ನಿರ್ಮಾಣದ ಕುರಿತು ಜನ್ಮಭೂಮಿಯಲ್ಲಿ ನಿರಂತರ ಅಧ್ಯಯನ ಮುಂದುವರಿದೆ.
ರಾಮ ಮಂದಿರದ ನಿರ್ಮಾಣಕ್ಕೆ ಸಂಬಂಸಿ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯಾದಲ್ಲಿ ಏನೆಲ್ಲ ಚಟುವಟಿಕೆಗಳು ನಡೆಯುತ್ತಿವೆ? ಏನು ಕೆಲಸಗಳಾಗುತ್ತಿವೆ ಎಂಬ ಕುತೂಹಲ ರಾಮ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ `ಹೊಸ ದಿಗಂತ’ ಅಯೋಧ್ಯಾದಲ್ಲಿ ಮಂದಿರ ಸಂಬಂಸಿ ನಡೆಯುತ್ತಿರುವ ಪ್ರಕ್ರಿಯೆಗಳ ಕುರಿತು ಬೆಳಕು ಚೆಲ್ಲುತ್ತಿದೆ.
ಏಳು ತಿಂಗಳಿಂದ ನಿರಂತರ ಅಧ್ಯಯನ
ರಾಮ ಮಂದಿರ ನಿರ್ಮಾಣಕ್ಕಾಗಿ ಸುಪ್ರೀಂ ಕೋಟ್ ನಿರ್ದೇಶನದಂತೆ ಕೇಂದ್ರ ಸರಕಾರ ರಚಿಸಿರುವ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳೆದ ಫೆಬ್ರವರಿಯಿಂದಲೇ ಕಾರ್ಯಪ್ರವೃತ್ತವಾಗಿದೆ. ಪುಣ್ಯ ಭೂಮಿ ಅಯೋಧ್ಯಾದಲ್ಲಿ ಮಂದಿರ ನಿರ್ಮಾಣದ ಪ್ರಕ್ರಿಯೆ ಶುರುವಾಗಿದೆ. ಕಳೆದ ಏಳು ತಿಂಗಳುಗಳಿಂದ ಅಂದರೆ ಜೂನ್‍ನಿಂದ ನಿರಂತರ ಅಧ್ಯಯನ ನಡೆಯುತ್ತಿದೆ. ಅದಕ್ಕೂ ಮೊದಲೇ ಫೆಬ್ರವರಿಯಲ್ಲಿ ಮೊದಲ ಮಣ್ಣು ಪರೀಕ್ಷೆ ನಡೆಸಲಾಗಿತ್ತು. ಎರಡನೇ ಪರೀಕ್ಷೆ ಜುಲೈನಲ್ಲಿ ಮಾಡಲಾಯಿತು. ಇದೀಗ ಮೂರನೇ ಬಾರಿ ಮಣ್ಣಿನ ಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ವರದಿಯಲ್ಲಿ ಸಣ್ಣ ಸಂಶಯ, ಗೊಂದಲ ಉಳಿದುಕೊಂಡರೂ ಎರಡನೇ ಬಾರಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಗರ್ಭಗುಡಿಯಡಿಯಲ್ಲಿ ನೀರಿನ ತೊರೆ !
ರಾಡಾರ್ ತರಂಗಗಳ ಮೂಲಕ 70 ಮೀಟರ್ ಭೂಗರ್ಭದೊಳಗೆ ಭೂಮಿ ಧಾರಣಾ ಸಾಮಥ್ರ್ಯ ಮತ್ತು ಮಣ್ಣಿನ ಗುಣಲಕ್ಷಣದ ಕುರಿತು ಅಧ್ಯಯನ ನಡೆಸಲಾಗಿದೆ. ಮೊದಲ 200 ಅಡಿ ಆಳದಲ್ಲಿ ಮಣ್ಣಿನ ಮಾದರಿಗಳನ್ನು ಪರಿಶೀಲಿಸಿದಾಗ ಉತ್ತಮವಾದ ಮರಳು ಇರುವುದು ಕಂಡುಬಂದಿದೆ. ಇತ್ತೀಚೆಗೆ ಇಸ್ರೋ ಫೆÇೀಟೋ ಕಳುಹಿಸಿದ್ದು, ಅದರಲ್ಲಿ ರಾಮ ಮಂದಿರ ನಿರ್ಮಿಸುವ ಜಾಗದಲ್ಲಿ ಭೂಗರ್ಭದಲ್ಲಿ ಸರಯೂ ನದಿಯ ತೊರೆಯೊಂದು ಇರುವುದು ದೃಢಪಟ್ಟಿದೆ. ಒಂದು ವೇಳೆ 200-400 ವರ್ಷಗಳ ನಂತರ ಆ ತೊರೆಯಲ್ಲಿ ನೀರು ಹರಿದರೆ ಏನು ಮಾಡಬೇಕೆಂದು ಇಸ್ರೋ ಕಳುಹಿಸಿದ ಚಿತ್ರಗಳನ್ನಾಧರಿಸಿ ಅಧ್ಯಯನ ನಡೆಸಲಾಗುತ್ತಿದೆ.
ಅಯೋಧ್ಯಾದಲ್ಲಿ ಬೀಡುಬಿಟ್ಟ ತಜ್ಞರು
ರಾಮ ಮಂದಿರ ರಾಷ್ಟ್ರೀಯ ಮಹತ್ವವನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರ ನೇತೃತ್ವದಲ್ಲಿ 10 ಸಂಸ್ಥೆಗಳು ಮಂದಿರ ನಿರ್ಮಾಣದ ಬಗ್ಗೆ ಗಂಭೀರ ಅಧ್ಯಯನ ನಡೆಸುತ್ತಿವೆ. ಹೈದರಾಬಾದ್‍ನ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‍ಸ್ಟಿಟ್ಯೂಟ್(ಎನ್‍ಜಿಆರ್‍ಐ)ನ ತಜ್ಞರ ತಂಡ ಶನಿವಾರ ಅಯೋಧ್ಯಾಗೆ ಭೇಟಿ ನೀಡಿದೆ. ಎನ್‍ಜಿಆರ್‍ಐ ತಂಡ ಮೂರನೇ ಬಾರಿ ಅಧ್ಯಯನ ನಡೆಸುತ್ತಿದೆ. ರೂರ್ಕಿ ಸಿಬಿಆರ್‍ಐ, ದಿಲ್ಲಿ, ಗುವಾಹಟಿ, ಚೆನ್ನೈ ಮತ್ತು ಮುಂಬೈನ ಐಐಟಿ ಸಂಸ್ಥೆಗಳು, ಸೂರತ್‍ನ ಎನ್‍ಐಟಿ, ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಲಾರ್ಸೆನ್ ಆ್ಯಂಡ್ ಟೌಬ್ರೊ (ಎಲ್ ಆ್ಯಂಡ್ ಟಿ) ಮತ್ತು ಮೇಲ್ವಿಚಾರಣೆಯ ಹೊಣೆಗಾರಿಕೆ ಹೊಂದಿರುವ ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ ಸಂಸ್ಥೆಯ ತಜ್ಞರು ಅಯೋಧ್ಯಾದಲ್ಲಿಯೇ ಬೀಡು ಬಿಟ್ಟು ಅಧ್ಯಯನ ನಡೆಸುತ್ತಿದ್ದಾರೆ.
ಇದು ರಾಮ ಮಂದಿರದ ಅಡಿಪಾಯದ ಪ್ರಾಮುಖ್ಯತೆ ತಿಳಿಸುತ್ತದೆ. ಮಂದಿರದ ಸಂಪೂರ್ಣ ಭಾರವನ್ನು ತಡೆಯುವ ಸಾಮಥ್ರ್ಯವುಳ್ಳ ಅಡಿಪಾಯ ನಿರ್ಮಿಸಬೇಕು. ಅಷ್ಟೇ ಅಲ್ಲ, ಸುದೀರ್ಘ ಸಾವಿರಾರು ವರ್ಷಗಳ ಕಾಲ ಬಾಳಿಕೆ ಬರಬೇಕು. ಇದೆಲ್ಲವನ್ನು ಇಟ್ಟುಕೊಂಡು ಅಧ್ಯಯನ ನಡೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣ ಸಮಿತಿ ಮಾತ್ರವಲ್ಲದೇ ನಿರ್ಮಾಣ ಕಾಮಗಾರಿ ಮೇಲ್ವಿಚಾರಣೆಗೆ ಆರು ಮಂದಿಯ ಉಪಸಮಿತಿಯನ್ನೂ ರಚಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ