ಮೇ ಮೊದಲ ವಾರ ಕೇರಳ ವಿಧಾನಸಭಾ ಚುನಾವಣೆ :ರಾಜ್ಯ ಚುನಾವಣಾ ಆಯೋಗ

ಕಾಸರಗೋಡು: ಕೇರಳದಲ್ಲಿ ವಿಧಾನಸಭಾ ಚುನಾವಣೆಯು ಮೇ ಮೊದಲ ವಾರದಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ಆರಂಭಗೊಂಡಿವೆ ಎಂದು ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಟೀಕಾರಾಂ ಮೀನಾ ತಿರುವನಂತಪುರದಲ್ಲಿ ಪ್ರಕಟಿಸಿದ್ದಾರೆ.
ವಿಧಾನಸಭಾ ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ ಎರಡನೇ ವಾರದಲ್ಲಿ ಚುನಾವಣಾ ಅಸೂಚನೆ ಪ್ರಕಟವಾಗುವ ನಿರೀಕ್ಷೆಯಿದೆ. ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ಮೊದಲ ವಾರ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 31 ರೊಳಗೆ ಚುನಾವಣಾ ಪ್ರಕ್ರಿಯೆಯು ಪೂರ್ಣಗೊಳ್ಳಲಿದೆ ಎಂದರು.
ಚುನಾವಣೆ ನಡೆಸುವ ಬಗ್ಗೆ ರಾಜ್ಯದ ವಿವಿಧ ರಾಜಕೀಯ ಪಕ್ಷಗಳ ಜೊತೆ ಸಮಾಲೋಚಿಸಿದ ಬಳಿಕ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಕಳುಹಿಸಿಕೊಡಲಾಗುವುದು ಎಂದರು.
80ರ ಮೇಲಿನವರಿಗೆ ಅಂಚೆ ಮತ ಅವಕಾಶ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 80ಕ್ಕಿಂತ ಹೆಚ್ಚಿನ ಪ್ರಾಯದ ಮತದಾರರಿಗೆ ಮತ್ತು ಅಂಗವೈಕಲ್ಯವುಳ್ಳವರಿಗೆ ಅಂಚೆ ಮತದಾನಕ್ಕೂ (ಕೋವಿಡ್-19ಸೋಂಕಿತರ ಬಗ್ಗೆ ಅನಂತರ ತೀರ್ಮಾನಿಸಲಾಗುವುದು)ಅವಕಾಶ ಕಲ್ಪಿಸಲಾಗುವುದು ಎಂದು ಅವರು ಪ್ರಕಟಿಸಿದರು. ಹಾಗೆಯೇ ಮತಗಟ್ಟೆಗಳಲ್ಲಿ ಮತದಾನ ಮಾಡುವ ಮತದಾರರ ಪ್ರಮಾಣವನ್ನು 1400ಇದ್ದುದನ್ನು 1000ಕ್ಕೆ ಇಳಿಸಲಾಗುವುದು .ಕೋವಿಡ್-19ರ ಹಿನ್ನೆಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ 15,000ದಷ್ಟು ಹೆಚ್ಚು ಮತದಾನ ಕೇಂದ್ರಗಳನ್ನು , ಅಂದರೆ ಈಗ ಇರುವ 25000ಮತಗಟ್ಟೆಗಳನ್ನು 45ಸಾವಿರಕ್ಕೇರಿಸುವ ಅಗತ್ಯವಿದೆ.ಇದಕ್ಕೆ ಬೇಕಾದ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.ಒಂದೇ ಹಂತದಲ್ಲಿ ಚುನಾವಣೆ ನಡೆದರೆ ಅಕಾರಿಗಳ ಮತ್ತು ಸಿಬ್ಬಂದಿಗಳ ನಿಯೋಜನೆ ಕಷ್ಟವಾಗಲಿದೆ ಎಂದು ವಿವರಿಸಿದರು.
ಕೇಂದ್ರ ಚುನಾವಣಾ ಆಯೋಗದ ಆದೇಶದಂತೆ, ರಾಜ್ಯ ಪೆÇಲೀಸ್ ವರಿಷ್ಠ ಲೋಕನಾಥ ಬೆಹ್ರಾ ಅವರನ್ನು ವರ್ಗಾಯಿಸಬಾರದೆಂದು ಮೀನಾ ಸೂಚಿಸಿದರು. ಕೇಂದ್ರದ ನಿರ್ದೇಶನದಂತೆ ಒಂದೇ ಹುದ್ದೆಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದ ಪೆÇಲೀಸ್ ಅಕಾರಿಗಳನ್ನು ಐಜಿ ಹುದ್ದೆಗೆ ವರ್ಗಾಯಿಸುವುದು ರೂಢಿಯಾಗಿದೆ. ಆದರೆ ಈ ವಿಷಯದಲ್ಲಿ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಟಿಕಾರಾಂ ಮೀನಾ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ