ಕರ್ನಾಟಕ ಸ್ಟಾಂಪು ವಿಧೇಯಕ-2020 ಮಂಡನೆ

ವಿಧಾನಸಭೆ: ಕರ್ನಾಟಕ ಸ್ಟಾಂಪು(ಎರಡನೇ ತಿದ್ದುಪಡಿ) ವಿಧೇಯಕ-2020 ನ್ನು ಕಂದಾಯ ಸಚಿವ ಆರ್. ಅಶೋಕ ಮಂಡಿಸಿದರು.
ವಿಧೇಯಕದ ಕುರಿತು ವಿವರಿಸಿದ ಅವರು, ಕರ್ನಾಟಕ ಸ್ಟಾಂಪು ಅನಿಯಮ, 1957ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ವಿಧೇಯಕ ಮಂಡಿಸಿದ್ದು, ರಾಜ್ಯ ಸರ್ಕಾರವು, ಸಾರ್ವಜನಿಕ ಹಿತಾಸಕ್ತಿಯಲ್ಲಿ, ಅಸೂಚನೆಯ ಮೂಲಕ, ವಿಸ್ತರಣೆ, ಆಧುನೀಕರಣ ಮತ್ತು ವೈವ್ಯೀಕರಣ ಪ್ರಾಜೆಕ್ಟಗಳನ್ನು ಒಳಗೊಂಡಂತೆ ಹೊಸದಾದ ಮತ್ತು ಅಸ್ತಿತ್ವದಲ್ಲಿರುವ ಅತಿಸಣ್ಣ, ಸಣ್ಣ, ಮಧ್ಯಮ ಉದ್ಯಮಗಳು  ದೊಡ್ಡ, ಮೆಗಾ, ಅಲ್ಟ್ರಾ ಮೆಗಾ, ಸೂರ್ಪ ಮೆಗಾ ಉದ್ಯಮಗಳು ಕಾರ್ಯಗತಗೊಳಿಸಿದ, 2020-25ರ ಕರ್ನಾಟಕ ಕೈಗಾರಿಕಾ ನೀತಿಯಲ್ಲಿ ನಿರ್ದಿಷ್ಟಪಡಿಸಿದಂತೆ ಯಾವುದೇ ಅಂಥ ಪ್ರಾಜೆಕ್ಟ್‍ಗಳ ಸಂಬಂಧದಲ್ಲಿ, ಅದರಲ್ಲಿ ನಿರ್ದಿಷ್ಟಪಡಿಸಬೇಕಾದ ಯಾವುದೇ ಲಿಖಿತಗಳ ಮೇಲೆ ಪಾವತಿಸಬೇಕಾದ ಸ್ಟಾಂಪು ಶುಲ್ಕವನ್ನು, ಕೈಗಾರಿಕೆಗಳ ಮತ್ತು ವಾಣಿಜ್ಯ ನಿರ್ದೇಕರಿಂದ, ಆ ಮಟ್ಟಿಗೆ ಪ್ರಮಾಣಪತ್ರವನ್ನು ಒದಗಿಸುವುದಕ್ಕೆ ಒಳಪಟ್ಟು, ಕಡಿಮೆಗೊಳಿಸಬಹುದು ಅಥವಾ ಮಾ ಫಿ ಮಾಡಬಹುದು. ಮಾರುಕಟ್ಟೆ ಮಲ್ಯವು 20 ಲಕ್ಷಗಳು ಅಥವಾ ಅದಕ್ಕಿಂತ ಕಡಿಮೆ ಎದ್ದಲ್ಲಿ ಮಲ್ಯದ ಶೇ.2 ಹಾಗೂ ಮಾರುಕಟ್ಟೆ ಮಲ್ಯವು 20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದು, ಆದರೆ 35 ಲಕ್ಷ ರೂಪಾಯಿಗಳವರೆಗೆ ಮತ್ತು ಅದನ್ನು ಒಳಗೊಂಡು ಇದ್ದಲ್ಲಿ ಮಲ್ಯದ ಶೇ.3 ರಷ್ಟಕ್ಕೆ ಇರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸಂಸದೀಯ ಕಾರ್ಯದರ್ಶಿಗಳ ವೇತನ, ಭತ್ಯೆಗಳು ಮತ್ತು ಸಂಕೀರ್ಣ ಉಪಬಂಧಗಳ (ನಿರಸನಗೊಳಿಸುವ) ವಿಧೇಯಕ-2020 ನ್ನು ಕಾನೂನು ಸಚಿವ ಮಾಧುಸ್ವಾಮಿ ಮಂಡಿಸಿದರು. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ಎರಡನೇ ತಿದ್ದುಪಡಿ) ವಿಧೇಯಕ-2020 ನ್ನು ಕಾರ್ಮಿಕ ಮತ್ತು ಸಕ್ಕರೆ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್ ಮಂಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ